ಇಂಫಾಲ್: ಮಣಿಪುರದಲ್ಲಿ ಮಲೇರಿಯಾ ರೋಗಕ್ಕೆ ಮಹಿಳೆ, ಬಾಲಕಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಅಲ್ಲದೆ ಇನ್ನೂ 12 ಜನರಲ್ಲಿ ರೋಗ ಇರುವುದರ ಕುರಿತು ವರದಿಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
12ರಲ್ಲಿ ಏಳು ಪ್ರಕರಣಗಳು ಚುರಚಂದ್ಪುರ ಜಿಲ್ಲೆಯಲ್ಲಿ ಮತ್ತು ಐದು ಪ್ರಕರಣಗಳು ನೋನಿಯಲ್ಲಿ ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.
ಗಿರಿ ಪ್ರದೇಶ ಮತ್ತು ಅಲ್ಲಿ ಗ್ರಾಮಗಳಲ್ಲಿನ ಜನರಿಗೆ ಮಲೇರಿಯಾ ಪರೀಕ್ಷೆ ಮಾಡುವುದರ ಜತೆಗೆ ರೋಗದ ಕುರಿತು ಜಾಗೃತಿ ಮೂಡಿಸಲು ಸರ್ಕಾರ ವೈದ್ಯಕೀಯ ತಂಡಗಳನ್ನು ರವಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.