ADVERTISEMENT

ಪೈಲಟ್‌ ವೇಶದಲ್ಲಿದ್ದ ಟಿಕ್‌ಟಾಕ್ ಕಲಾವಿದನ ಬಂಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 11:15 IST
Last Updated 20 ನವೆಂಬರ್ 2019, 11:15 IST
   

ನವದೆಹಲಿ: ಇಲ್ಲಿನಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಲುಫ್ತಾನ್ಸಾವಿಮಾನ ಸಂಸ್ಥೆಯ ಪೈಲಟ್‌ಸಮವಸ್ತ್ರ ಧರಿಸಿದ್ದ ಟಿಕ್‌ಟಾಕ್‌ಕಲಾವಿದನನ್ನುಭದ್ರತಾಸಿಬ್ಬಂದಿಗಳುಬಂಧಿಸಿದ್ದಾರೆ.

ಬಂಧಿತ ಟಿಕ್‌ಟಾಕ್‌ ಕಲಾವಿದನನ್ನುರಾಜನ್ಮಹಬುಬಾನಿ(48) ಎಂದು ಗುರುತಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿಭದ್ರತಾ ತಪಾಸಣೆಗೆ ಮತ್ತು ಸರತಿ ಸಾಲಿನಲ್ಲಿನಿಲ್ಲುವುದನ್ನುತಪ್ಪಿಸಲು ನಕಲಿಐಡಿಕಾರ್ಡ್‌ನ್ನು ಬಳಸುತ್ತಿದ್ದ ಎಂದುಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪೈಲಟ್‌ ಸಮವಸ್ತ್ರದಲ್ಲಿದ್ದ ಮಹಬುಬಾನಿಬಗ್ಗೆ ಅನುಮಾನಗೊಂಡಜರ್ಮನ್ಏರ್‌ಲೈಸ್ಸ್‌ ಸಂಸ್ಥೆಯ ಮುಖ್ಯಭದ್ರತಾಧಿಕಾರಿ ಸಿಐಎಸ್‌ಗೆ ಮಾಹಿತಿ ನೀಡಿದ್ದಾರೆ. ಮಹಬುಬಾನಿಬಂಧಿಸಿದ ಅಧಿಕಾರಿಗಳು ನಕಲಿಐಡಿಕಾರ್ಡ್‌ಗಳನ್ನುವಶಪಡಿಸಿಕೊಂಡಬಳಿಕ ಮಹಬುಬಾನಿಯನ್ನು ದೆಹಲಿಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ವಿಮಾನಯಾನಕ್ಕೆ ಸಂಬಂಧಿಸಿದಂತೆ ಟಿಕ್‌ಟಾಕ್‌ ಹಾಗೂಯುಟ್ಯೂಬ್‌ವಿಡಿಯೊಗಳನ್ನುತಯಾರಿಸುತ್ತಿದ್ದ. ಲುಫ್ತಾನ್ಸಾವಿಮಾನಯಾನ ಸಂಸ್ಥೆಯನಕಲಿಐಡಿಕಾರ್ಡ್‌ ಅನ್ನು ಕಾಕ್‌ನಿಂದಪಡೆದಿರುವುದಾಗಿಆರೋಪಿ ಬಹಿರಂಗಪಡಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿವಿಧ ವೃತ್ತಿಗಳ ಸಮವಸ್ತ್ರಗಳನ್ನು ಧರಿಸಿಫೋಟೊ ತೆಗೆದುಕೊಂಡಿರುದಾಗಿತನಿಖೆಯ ವೇಳೆ ಮಹಬುಬಾನಿಯು ಹೇಳಿದ್ದಾನೆ.

ಮಹಬುಬಾನಿಫೋನ್‌ನಲ್ಲಿ ಆರ್ಮಿ ಕರ್ನಲ್‌ನ ಸಮವಸ್ತ್ರದಲ್ಲಿರುವಚಿತ್ರಗಳು ಇದ್ದವು. ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.