ADVERTISEMENT

‌ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ₹2.4 ಕೋಟಿ ಮೌಲ್ಯದ ಚಿನ್ನ ಕಾಣಿಕೆ

ಪಿಟಿಐ
Published 30 ಜುಲೈ 2025, 3:14 IST
Last Updated 30 ಜುಲೈ 2025, 3:14 IST
<div class="paragraphs"><p>‌ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ₹2.4 ಕೋಟಿ ಮೌಲ್ಯದ ಚಿನ್ನ ಕಾಣಿಕೆ</p></div>

‌ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ₹2.4 ಕೋಟಿ ಮೌಲ್ಯದ ಚಿನ್ನ ಕಾಣಿಕೆ

   

ಚಿತ್ರ ಕೃಪೆ: ಎಸ್‌ವಿಬಿಸಿಟಿಟಿಡಿಯು ಎಕ್ಸ್‌ ಖಾತೆ

ತಿರುಪತಿ: ಚೆನ್ನೈನ ಸುದರ್ಶನ ಎಂಟರ್‌ಪ್ರೈಸಸ್‌ ಕಂಪನಿಯು ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ₹2.4 ಕೋಟಿ ಮೌಲ್ಯದ 2.5 ಕೆ.ಜಿ. ತೂಕದ ಚಿನ್ನದ ಶಂಖ ಮತ್ತು ಚಕ್ರವನ್ನು ಕಾಣಿಕೆ ನೀಡಿದೆ.

ADVERTISEMENT

ಕಂಪನಿಯ ಪ್ರತಿನಿಧಿಗಳು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ದೇಗುಲದ ರಂಗನಾಯಕಕುಲ ಮಂಟಪದಲ್ಲಿ ಶಂಖ ಮತ್ತು ಚಕ್ರವನ್ನು ಹಸ್ತಾಂತರಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಪ್ರಕಟಣೆ ಮೂಲಕ ಟಿಟಿಡಿ ಮಾಹಿತಿ ನೀಡಿದೆ. ತಿರುಪತಿಯಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಅಧಿಕೃತ ಪಾಲಕತ್ವ ಟಿಟಿಡಿಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.