ADVERTISEMENT

ರಾಜ್ಯಸಭೆಯಲ್ಲಿ ಅಶಿಸ್ತು: ಟಿಎಂಸಿ ಸಂಸದ ಡೆರೆಕ್‌ ಒಬ್ರಯಾನ್ ಅಮಾನತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2023, 7:29 IST
Last Updated 14 ಡಿಸೆಂಬರ್ 2023, 7:29 IST
<div class="paragraphs"><p>ಡೆರೆಕ್‌  ಒಬ್ರಯಾನ್</p></div>

ಡೆರೆಕ್‌ ಒಬ್ರಯಾನ್

   

ಪಿಟಿಐ ಚಿತ್ರ

ನವದೆಹಲಿ: ಭದ್ರತಾ ಲೋಪದ ಬಳಿಕ ಇಂದು ಸಂಸತ್ತಿನ ಅಧಿವೇಶನ ಪುನರಾರಂಭವಾಗಿದೆ. ರಾಜ್ಯಸಭೆ ಸದನದ ಬಾವಿಗೆ ಇಳಿದು ಅಶಿಸ್ತಿನ ನಡುವಳಿಕೆ ತೋರಿದ ಆರೋಪದ ಮೇಲೆ ತೃಣಮೂಲ ಸಂಸದ ಡೆರೆಕ್‌ ಒಬ್ರಯಾನ್ ಅವರನ್ನು ಅಧಿವೇಶನದ ಉಳಿದ ಅವಧಿಯವರೆಗೆ ಅಮಾನತು ಮಾಡಲಾಗಿದೆ. 

ADVERTISEMENT

ಒಬ್ರಯಾನ್ ಅವರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗುತ್ತಾ, ಭದ್ರತಾ ವೈಫಲ್ಯ ಪ್ರಕರಣವನ್ನು ಚರ್ಚಿಸಬೇಕು ಎಂದು ಅಶಿಸ್ತಿನ ವರ್ತನೆ ತೋರಿದ್ದರು. ಈ ಹಿನ್ನೆಲೆ ಸ್ಪೀಕರ್‌ ಜಗದೀಪ್‌ ಧನಕರ್‌ ಅವರು, ಈ ಕೂಡಲೇ ಒಬ್ರಯಾನ್ ಅವರು ಸದನವನ್ನು ತೊರೆಯುವಂತೆ ಆದೇಶಿಸಿದ್ದಾರೆ. ಆದರೂ ಒಬ್ರಯಾನ್ ಸೇರಿ ಇತರ ಪ್ರತಿಪಕ್ಷಗಳ ನಾಯಕರು ಗಲಾಟೆಯನ್ನು ಮುಂದುವರಿಸಿದ್ದರು. ಹೀಗಾಗಿ ಅಧಿವೇಶನವನ್ನು ಮೊಟಕುಗೊಳಿಸಿದ ಸ್ಪೀಕರ್‌ 2 ಗಂಟೆಗೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.