ಕಡಲ್ಗಳ್ಳರ ದಾಳಿ
ನಾಗಪಟ್ಟಣಂ (ತಮಿಳುನಾಡು): ಮೀನುಗಾರಿಕೆಗೆ ತೆರಳಿದ್ದ ಇಲ್ಲಿನ ಮೀನುಗಾರರ ಮೇಲೆ ಶ್ರೀಲಂಕಾದ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ದೂರು ದಾಖಲಾಗಿದೆ ಎಂದು ನಾಗಪಟ್ಟಣಂ ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಕೇಂದ್ರ ಸರ್ಕಾರ, ವಿದೇಶಾಂಗ ಇಲಾಖೆ ಮತ್ತು ನೌಕಾ ಪಡೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಲ್ಲಿನ ಸೆರತೊರು ಗ್ರಾಮಸ್ಥರು ಎರಡು ದೋಣಿಗಳಲ್ಲಿ ಬಂಗಾಳ ಕೊಲ್ಲಿಗೆ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಶ್ರೀಲಂಕಾದ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ಮಾಡಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ಮೀನುಗಾರರ ಬಳಿ ಇದ್ದ ಮೀನುಗಾರಿಕೆ ಬಲೆಗಳು, ಉಪಕರಣಗಳು ಮತ್ತು ಮೀನುಗಳನ್ನು ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಬಳಿಕ ಮೀನುಗಾರರು ನಾಗಪಟ್ಟಣಂಗೆ ಮರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.