ADVERTISEMENT

ಪ್ರತಿ ಮದುವೆ ಹಿಂಸಾತ್ಮಕ, ಪ್ರತಿ ಪುರುಷ ಅತ್ಯಾಚಾರಿ ಎನ್ನುವುದು ಸರಿಯಲ್ಲ: ಸ್ಮೃತಿ

ಪಿಟಿಐ
Published 2 ಫೆಬ್ರುವರಿ 2022, 10:48 IST
Last Updated 2 ಫೆಬ್ರುವರಿ 2022, 10:48 IST
ಸ್ಮೃತಿ ಇರಾನಿ
ಸ್ಮೃತಿ ಇರಾನಿ   

ನವದೆಹಲಿ: ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಎಲ್ಲರ ಆದ್ಯತೆಯಾಗಿದೆ. ಆದರೆ, ಪ್ರತಿ ಮದುವೆಯನ್ನು ಹಿಂಸಾತ್ಮಕವೆಂದು ಮತ್ತು ಪ್ರತಿಯೊಬ್ಬ ಪುರುಷ ಅತ್ಯಾಚಾರಿ ಎಂದು ಖಂಡಿಸುವುದು ಸೂಕ್ತವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ವೈವಾಹಿಕ ಅತ್ಯಾಚಾರದ ಕುರಿತು ಸಿಪಿಐ ನಾಯಕ ಬಿನೋಯ್ ವಿಶ್ವಂ, ಕೌಟುಂಬಿಕ ಹಿಂಸಾಚಾರದ ವ್ಯಾಖ್ಯಾನದ ಕುರಿತು ಕೌಟುಂಬಿಕ ಹಿಂಸಾಚಾರ ಕಾಯ್ದೆಯ ಸೆಕ್ಷನ್ 3 ಮತ್ತು ಅತ್ಯಾಚಾರದ ಐಪಿಸಿಯ ಸೆಕ್ಷನ್ 375 ಅನ್ನು ಸರ್ಕಾರ ಗಮನಿಸಿದೆಯೇ ಎಂದು ಅವರು ಕೇಳಿದರು.

ಈ ಪ್ರಶ್ನೆಗೆ ಉತ್ತರಿಸಿದ ಅವರು, '....ಈ ದೇಶದ ಪ್ರತಿಯೊಂದು ವಿವಾಹವನ್ನು ಹಿಂಸಾತ್ಮಕ ಮತ್ತು ಈ ದೇಶದ ಪ್ರತಿಯೊಬ್ಬ ಪುರುಷನನ್ನು ಅತ್ಯಾಚಾರಿ ಎಂದು ಖಂಡಿಸುವುದು ಈ ಸದನದಲ್ಲಿ ಸೂಕ್ತವಲ್ಲ ಎಂದು ನಾನು ಹೇಳುತ್ತೇನೆ' ಎಂದು ಇರಾನಿ ಹೇಳಿದರು.

ADVERTISEMENT

'ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಈ ದೇಶದಲ್ಲಿನ ಮಹಿಳೆಯರನ್ನು ರಕ್ಷಿಸುವುದು ಸರ್ಕಾರ ಪ್ರಯತ್ನಿಸುತ್ತಿದೆ. ಸದ್ಯ ದೇಶದಾದ್ಯಂತ 30ಕ್ಕೂ ಹೆಚ್ಚು ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿದ್ದು, ಇವು 66 ಲಕ್ಷಕ್ಕೂ ಹೆಚ್ಚಿನ ಮಹಿಳೆಯರಿಗೆ ಸಹಾಯ ಮಾಡಿದೆ. ಇದಲ್ಲದೆ, 703 ‘ಒನ್ ಸ್ಟಾಪ್ ಕೇಂದ್ರಗಳು’ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಇವು ಐದು ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯ ಮಾಡಿವೆ. 'ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯು ಎಲ್ಲರ ಆದ್ಯತೆಯಾಗಿದೆ. ಆದರೆ, ಈ ದೇಶದಲ್ಲಿ ಪ್ರತಿ ಮದುವೆಯನ್ನು ಹಿಂಸಾತ್ಮಕವಾಗಿಸುವುದು ಸೂಕ್ತವಲ್ಲ ಎಂಬುದನ್ನು ನಾನು ಮತ್ತೊಮ್ಮೆ ಪುನರುಚ್ಚರಿಸುತ್ತೇನೆ' ಎಂದು ಅವರು ಹೇಳಿದರು.

ಪ್ರತಿಯೊಬ್ಬ ಮನುಷ್ಯನೂ ಅತ್ಯಾಚಾರಿ ಎಂಬುದು ನಾನು ಹೇಳಿದ್ದರ ಅರ್ಥವಲ್ಲ ಎಂದು ಹೇಳಿದ ವಿಶ್ವಂ, ಮತ್ತೊಂದು ಪ್ರಶ್ನೆಯನ್ನು ಮುಂದಿಟ್ಟರು - ಸರ್ಕಾರವು ಈ ವಿಷಯದ ಬಗ್ಗೆ ಡೇಟಾವನ್ನು ಸಂಗ್ರಹಲು ಸಾಧ್ಯವಾದರೆ ಅದನ್ನು ಸಂಸತ್ತಿಗೆ ಸಾಧ್ಯವಾದಷ್ಟು ಬೇಗ ಸಲ್ಲಿಸಲಿ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಅವರಿಂದ ದಾಖಲೆಗಳನ್ನು ಪಡೆಯಲು ಸದಸ್ಯರು ಸೂಚಿಸುತ್ತಿದ್ದಾರೆ. ಆದರೆ, ಇಂದು ಈ ಸದನದಲ್ಲಿ ರಾಜ್ಯ ಸರ್ಕಾರಗಳ ಪರವಾಗಿ ಕೇಂದ್ರವು ಶಿಫಾರಸು ವಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.