ADVERTISEMENT

ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಮಸೂದೆಗೆ ಅನುಮೋದನೆ

ಪಿಟಿಐ
Published 3 ಡಿಸೆಂಬರ್ 2025, 15:24 IST
Last Updated 3 ಡಿಸೆಂಬರ್ 2025, 15:24 IST
<div class="paragraphs"><p>ತಂಬಾಕು</p></div>

ತಂಬಾಕು

   

ನವದೆಹಲಿ: ತಂಬಾಕು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಹೆಚ್ಚಿನ ಅಬಕಾರಿ ಸುಂಕ ವಿಧಿಸುವ ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿದೆ.

ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ– 2025 ಅನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಪ್ರಸ್ತುತ ಜಾರಿಯಲ್ಲಿರುವ ತೆರಿಗೆ ಪರಿಹಾರದ ಸ್ವರೂಪವು 2026ರ ಮಾರ್ಚ್‌ ವೇಳೆಗೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಈ ಮಸೂದೆ ಜಾರಿಗೆ ಬಂದ ನಂತರ ಸಿಗರೇಟ್‌, ಜಗಿಯುವ ತಂಬಾಕು, ಸಿಗಾರ್‌, ಹುಕ್ಕಾ, ಜರ್ದಾ ಮತ್ತು ಪರಿಮಳಯುಕ್ತ ತಂಬಾಕಿನಂತಹ ಎಲ್ಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಗರಿಷ್ಠ ಮಟ್ಟದಲ್ಲೇ ಮುಂದುವರಿಸಲು ಅವಕಾಶ ಸಿಗುತ್ತದೆ.

ಪ್ರಸ್ತುತ, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ಜೊತೆಗೆ ವಿವಿಧ ತೆರಿಗೆ ವಿಧಿಸಲಾಗುತ್ತಿದೆ.

ಈ ಮಸೂದೆಯು, ತಯಾರಿಸದ ತಂಬಾಕಿನ ಮೇಲೆ ಶೇ 60–70ರಷ್ಟು ಅಬಕಾರಿ ಸುಂಕ ವಿಧಿಸಲು ಪ್ರಸ್ತಾಪಿಸುತ್ತದೆ. ಸಿಗಾರ್‌ ಮತ್ತು ಚುಟ್ಟ ಮೇಲಿನ ಅಬಕಾರಿ ಸುಂಕವು ಶೇ 25ರಷ್ಟು ಅಥವಾ ಒಂದು ಸಾವಿರ ಸಿಗಾರ್‌ ಮೇಲೆ ₹5 ಸಾವಿರ ಯಾವುದು ಹೆಚ್ಚೋ ಅದನ್ನು ಪ್ರಸ್ತಾಪಿಸಲಾಗಿದೆ.

ಉದ್ದವಿರುವ ಹಾಗೂ ಫಿಲ್ಟರ್‌ ಆಧರಿಸಿ ಒಂದು ಸಾವಿರ ಸಿಗರೇಟ್‌ ಮೇಲೆ ₹2,700ರಿಂದ ₹11 ಸಾವಿರವರೆಗೆ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ. ಆದರೆ, ಜಗಿಯುವ ತಂಬಾಕಿಗೆ ಪ್ರತಿ ಕೆ.ಜಿಗೆ ₹100ವರೆಗೆ ತೆರಿಗೆ ವಿಧಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.