
ಮುಖ 10 ಸುದ್ದಿಗಳು
ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ಸುನೇತ್ರಾ ಪವಾರ್
ಮುಂಬೈ: ಮಹಾರಾಷ್ಟ್ರದಲ್ಲಿ ಎನ್‌ಸಿಪಿ (ಅಜಿತ್) ನಾಯಕಿ ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಪವಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಸಿಗರೇಟು,
ನವದೆಹಲಿ: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್‌ಟಿ ಫೆ. 1ರಿಂದ ಜಾರಿಗೆ ಬರಲಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.
ನವದೆಹಲಿ: ಅಮೆರಿಕದಲ್ಲಿ ಬಂಡವಾಳ ಸಂಗ್ರಹಿಸಲು ಇಲ್ಲಿನ ಷೇರು ಮಾರುಕಟ್ಟೆ ನಿಯಮಗಳ ಉಲ್ಲಂಘನೆ ಹಾಗೂ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಗೌತಮ್ ಅದಾನಿ ಅಮೆರಿಕದ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನೀಡುವ ಕಾನೂನು ನೋಟಿಸ್ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.
ಸಿ.ಜೆ.ರಾಯ್
ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಸಿ.ಜೆ. ರಾಯ್ ಅವರಿಗೆ ಶತ್ರುಗಳಾಗಲಿ, ಬೆದರಿಕೆಯಾಗಲಿ ಇರಲಿಲ್ಲ. ಅವರು ಖಿನ್ನತೆಯಿಂದಲೂ ಬಳಲುತ್ತಿರಲಿಲ್ಲ ಎಂದು ರಾಯ್ ಸಹೋದರ ಸಿ.ಜೆ. ಬಾಬು ತಿಳಿಸಿದ್ದಾರೆ.
ಕನಕಪುರ: ‘ರಿಯಲ್ ಎಸ್ಟೇಟ್ ಕಂಪನಿಯಾದ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣದ ಕುರಿತು, ನಮ್ಮ ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಚೇತನ್
ತುಮಕೂರು: ಠಾಣೆಯ ವಶದಲ್ಲಿದ್ದ ವಾಹನ ಬಿಡುಗಡೆಗೆ ₹40 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ.
ಯಶ್ ತಾಯಿ
ಹಾಸನ: ವಿದ್ಯಾನಗರದ ನಿವೇಶನಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್ ದೇವರಾಜು ಮಧ್ಯೆ ಶನಿವಾರ ಬೆಳಿಗ್ಗೆ ವಾಗ್ವಾದ ನಡೆದಿದೆ. ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದ ನಿವೇಶನ ವಿವಾದಕ್ಕೆ ಕಾರಣವಾಗಿದೆ. ಕೋರ್ಟ್ ಆದೇಶ ಇರುವುದಾಗಿ ಈ ಹಿಂದೆ ದೇವರಾಜು ಅವರು, ಪುಷ್ಪಾ ಅರುಣ್‌ಕುಮಾರ್ ಹಾಕಿದ್ದ ಕಾಂಪೌಂಡ್ ಹಾಗೂ ಶೆಡ್ ತೆರವು ಮಾಡಿದ್ದರು. ಈಗ ಮತ್ತೆ ಕಾಂಪೌಂಡ್ ಹಾಕಲು ಪುಷ್ಪ ಅರುಣ್‌ಕುಮಾರ್ ಮುಂದಾಗಿದ್ದರು.
ಸೇನೆ
ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಪ್ರದೇಶದಲ್ಲಿ ಉಗ್ರರು ಅಡಗಿರುವುದು ಪತ್ತೆಯಾಗಿದ್ದು, ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನಾಧಿಕಾರಿಗಳು ಶನಿವಾರ ಬೆಳಿಗ್ಗೆ ತಿಳಿಸಿದ್ದಾರೆ. ಎಲ್ಲ ಮೂಲಗಳಿಂದ ಲಭ್ಯವಾಗಿರುವ ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದಿರುವುದಾಗಿ ಸೇನೆ ತಿಳಿಸಿದೆ.
ಮೃತರು
ಕೊಟ್ಟೂರು: ಕೊಟ್ಟೂರಿನಲ್ಲಿ ಕುತೂಹಲ ಮೂಡಿಸಿದ್ದ ತ್ರಿವಳಿ ಕೊಲೆ ಪ್ರಕರಣ ಕೊನೆಗೂ ಶನಿವಾರ ಮಧ್ಯಾಹ್ನದ ವೇಳೆಗೆ ಬಯಲಾಗಿದ್ದು, ಆರೋಪಿ ತನ್ನ ಮನೆಯಲ್ಲೇ ತೋಡಿದ ಒಂದೇ ಗುಂಡಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.
ಮೆಲ್ಬರ್ನ್: ದಿಗ್ಗಜ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅವರು ಗಾಯದಿಂದ ಚೇತರಿಸದ ಕಾರಣ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಇದರಿಂದ ಪಂದ್ಯಾವಳಿ ಆರಂಭಕ್ಕೆ ಮೊದಲೇ ಆಸ್ಟ್ರೇಲಿಯಾ ಆಘಾತ ಅನಭವಿಸಿತು. ಆಯ್ಕೆಗಾರರು ಅವರ ಬದಲು ಇನ್ನೊಬ್ಬ ವೇಗಿ ಬೆನ್ ದ್ವಾರ್ಷಿಯರ್ಸ್ ಅವರನ್ನು 15 ಮಂದಿಯ ತಂಡಕ್ಕೆ ಆಯ್ಕೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.