ADVERTISEMENT

ಕೋವಿಡ್‌: ಸಕ್ರಿಯ ಪ್ರಕರಣಗಳಿಂತ ಗುಣಮುಖರ ಸಂಖ್ಯೆ 50 ಪಟ್ಟು ಹೆಚ್ಚಳ

ಸಾವಿನ ಸಂಖ್ಯೆಯಲ್ಲೂ ಇಳಿಕೆ, ಗುಣಮುಖರ ಪ್ರಮಾಣ ಶೇ 96.59

ಪಿಟಿಐ
Published 18 ಜನವರಿ 2021, 11:19 IST
Last Updated 18 ಜನವರಿ 2021, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ‘ಕೋವಿಡ್‌ 19‘ ‌ಸಕ್ರಿಯ ಪ್ರಕರಣಗಳಿಗಿಂತ, ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ 50 ಪಟ್ಟು ಹೆಚ್ಚಿದ್ದು, ಇದೊಂದು ಬಹೃತ್ ಸಾಧನೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಸ್ತುತ ಸೋಮವಾರದ ಹೊತ್ತಿಗೆ ದೇಶದಲ್ಲಿ ಕೋವಿಡ್‌ 19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,02,11,342ರಷ್ಟಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 2,08,012ರಷ್ಟಿದೆ. ಈ ಎರಡು ಪ್ರಕರಣಗಳಲ್ಲಿನ ವ್ಯತ್ಯಾಸ 1,00,03,330. ಈ ಅಂಕಿ ಅಂಶಗಳ ಪ್ರಕಾರ ಒಟ್ಟು ಗುಣಮುಖರಾಗುತ್ತಿರುವವರ ಸಂಖ್ಯೆ ಸಕ್ರಿಯ ಪ್ರಕರಣಕ್ಕಿಂತ 50 ಪಟ್ಟು ಹೆಚ್ಚು ಎಂದು ಸಚಿವಾಲಯ ಒತ್ತಿ ಹೇಳಿದೆ. ಈ ಮೂಲಕ ಭಾರತದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ 96.59ರಷ್ಟಿದೆ.

ದೇಶದಲ್ಲಿ ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 14,457ರಷ್ಟಿದ್ದರೆ, ಇದೇ ಅವಧಿಯಲ್ಲಿ ಸೋಂಕಿತರ ಸಂಖ್ಯೆ 13788.

ADVERTISEMENT

‘ಭಾರತದಲ್ಲಿ ಪ್ರತಿ ದಿನ ನಿರಂತರವಾಗಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗೆಯೇ ಸಾವಿನ ಸಂಖ್ಯೆಯೂ ಕುಸಿತ ಕಂಡಿದೆ. ಸುಮಾರು 8 ತಿಂಗಳ(7 ತಿಂಗಳು 23 ದಿನಗಳು) ನಂತರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 150 ಕ್ಕಿಂತ ಕಡಿಮೆ ಸಾವಿನ ಪ್ರಕರಣಗಳು(145) ದಾಖಲಾಗಿವೆ ಎಂದು ಸಚಿವಾಲಯ ಒತ್ತಿಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.