ADVERTISEMENT

108 ದಿನಗಳಲ್ಲಿ15.89 ಕೋಟಿ ಕೋವಿಡ್‌ ಲಸಿಕೆ ಪೂರೈಕೆ: ಆರೋಗ್ಯ ಸಚಿವಾಲಯ

ಪಿಟಿಐ
Published 4 ಮೇ 2021, 8:26 IST
Last Updated 4 ಮೇ 2021, 8:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕೋವಿಡ್‌ ನಿಯಂತ್ರಣಕ್ಕಾಗಿ ದೇಶದಲ್ಲಿ ಈವರೆಗೆ 15.89 ಕೋಟಿ ಡೋಸ್‌ ಲಸಿಕೆಯನ್ನು ನೀಡಲಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.

ದೇಶದಲ್ಲಿ ಸೋಮವಾರ (ಮೇ 3) ಒಂದೇ ದಿನ 17,08,390 ಡೋಸ್‌ಗಳನ್ನು ನೀಡಲಾಗಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೆ 18–44 ವರ್ಷದೊಳಗಿನ 4,06,339 ಮಂದಿ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಇದರಲ್ಲಿ ಛತ್ತೀಸಗಡ (1,025), ದೆಹಲಿ(40,028), ಗುಜರಾತ್‌(1,08,191), ಹರಿಯಾಣ (55,565),ಜಮ್ಮು ಮತ್ತು ಕಾಶ್ಮೀರ(5,587), ಕರ್ನಾಟಕ (2,353), ಮಹಾರಾಷ್ಟ್ರ (73,714), ಒಡಿಶಾ (6,802), ಪಂಜಾಬ್‌ (635), ರಾಜಸ್ಥಾನ (76,151), ತಮಿಳುನಾಡು (2,744) ಮತ್ತು ಉತ್ತರ ಪ್ರದೇಶದಲ್ಲಿ (33,544) ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲಾಗಿದೆ.

45–60 ವರ್ಷದೊಳಗಿನ 5,30,50,669 ಮತ್ತು 5,30,50,669 ಮಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ಡೋಸ್‌ ನೀಡಲಾಗಿದೆ. ದೇಶದಲ್ಲಿ ನೀಡಲಾದ ಒಟ್ಟು ಲಸಿಕೆಯಲ್ಲಿ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ, ಕೇರಳ, ಬಿಹಾರ, ಆಂಧ್ರಪ್ರದೇಶವು ಶೇಕಡ 66.94 ಪಾಲನ್ನು ಹೊಂದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.