ADVERTISEMENT

ತಿರುಪತಿ: ಅನ್ನಪ್ರಸಾದದಲ್ಲಿ ಮಸಾಲಾ ವಡೆ ನೀಡಲು ಟಿಟಿಡಿ ನಿರ್ಧಾರ

ಪಿಟಿಐ
Published 6 ಮಾರ್ಚ್ 2025, 15:59 IST
Last Updated 6 ಮಾರ್ಚ್ 2025, 15:59 IST
ತಿರುಪತಿ– ಸಾಂದರ್ಭಿಕ ಚಿತ್ರ
ತಿರುಪತಿ– ಸಾಂದರ್ಭಿಕ ಚಿತ್ರ   

ತಿರುಪತಿ: ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ವಿತರಿಸುವ ಉಚಿತ ಆಹಾರ ‘ಅನ್ನಪ್ರಸಾದ’ದ ಜೊತೆಗೆ ಮಸಾಲೆ ವಡೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ತಿರುಮಲದಲ್ಲಿರುವ ತರಿಗೊಂಡ ವೆಂಗಾಮಾಂಬಾ ಅನ್ನಪ್ರಸಾದ ಭವನದಲ್ಲಿ ಗುರುವಾರ ಟಿಟಿಡಿ ಮುಖ್ಯಸ್ಥ ಬಿ.ಆರ್‌.ನಾಯ್ಡು ಹಾಗೂ ಅಧಿಕಾರಿಗಳು ಮಸಾಲಾ ವಡೆ ವಿತರಿಸುವ ಸಮಾರಂಭಕ್ಕೆ ಚಾಲನೆ ನೀಡಿದರು.

ನಿತ್ಯವೂ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ 35 ಸಾವಿರ ಮಸಾಲಾ ವಡೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಉತ್ಸವ ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.