
ತಿರುಪತಿ: ‘ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಒಬೆರಾಯ್ ಹೋಟೆಲ್ಸ್‌ಗೆ ಹಸ್ತಾಂತರಿಸಲು ಎನ್‌ಡಿಎ ದೊಡ್ಡ ಪಿತೂರಿ ನಡೆಸಿದೆ. ಇದು ದೇವಸ್ಥಾನದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ’ ಎಂದು ವೈಎಸ್‌ಆರ್‌ಸಿಪಿ ನಾಯಕ ಬಿ.ಕರುಣಾಕರ ರೆಡ್ಡಿ ಆರೋಪಿಸಿದ್ದಾರೆ.
‘ಸ್ಥಿರಾಸ್ತಿ ಮಾರ್ಗಸೂಚಿ ದರದ ಪ್ರಕಾರ ₹460ಕೋಟಿಗೂ ಹೆಚ್ಚಿನ ಬೆಲೆಬಾಳುವ, ಮುಕ್ತ ಮಾರುಕಟ್ಟೆಯಲ್ಲಿ ₹3 ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯ ಇರುವ, ಅಲಿಪಿರಿ ಸಮೀಪದ ಸುಮಾರು 20 ಎಕರೆ ಜಮೀನನ್ನು ಪ್ರವಾಸೋದ್ಯಮ ಇಲಾಖೆಯ ₹18 ಕೋಟಿ ಮೌಲ್ಯದ ಜಮೀನಿನೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಟಿಟಿಡಿಯ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಒಬೆರಾಯ್ ಹೋಟೆಲ್ಸ್ ವಶಕ್ಕೆ ಒಪ್ಪಿಸಲು ಎನ್‌ಡಿಎ ಯೋಜನೆ ರೂಪಿಸಿದೆ’ ಎಂದು ಕರುಣಾಕರ ರೆಡ್ಡಿ ದೂರಿದ್ದಾರೆ.
‘ಎನ್‌ಡಿಎ ಅತ್ಯಂತ ವ್ಯವಸ್ಥಿತವಾಗಿ ವೆಂಕಟೇಶ್ವರ ಸ್ವಾಮಿಯ ಜಮೀನು ಕೊಳ್ಳೆ ಹೊಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಜಮೀನು ವಿನಿಮಯವು ಪಾರದರ್ಶಕವಾಗಿ ನಡೆದಿಲ್ಲ. ಸದ್ದಿಲ್ಲದೆ ನೋಂದಣಿ ನಡೆದಿದೆ. ಒಟ್ಟಾರೆ ಪ್ರಕ್ರಿಯೆ ಅನುಮಾನ ಮೂಡಿಸುವಂತಿದೆ. ಈಗಾಗಲೇ ಒಬೆರಾಯ್ ಸಮೂಹಕ್ಕೆ ಕಟ್ಟಡ ನಿಧಿ ರೂಪದಲ್ಲಿ ₹2 ಕೋಟಿ ಮತ್ತು ಮುದ್ರಾಂಕ ಮತ್ತು ಇತರೆ ಶುಲ್ಕವಾಗಿ ₹26 ಕೊಟಿ ಮನ್ನಾ ಮಾಡಲಾಗಿದೆ. ಈಗಾಗಲೇ ನಡೆದಿರುವ ಜಮೀನು ನೋಂದಣಿಯನ್ನು ರದ್ದುಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.