ADVERTISEMENT

ಕೋವಿಡ್‌ ಲಸಿಕೆ ಕುರಿತ ಪ್ರಶಾಂತ್‌ ಭೂಷಣ್‌ ಟ್ವೀಟ್‌ ‘ತಪ‍್ಪು ಮಾಹಿತಿ’: ಟ್ವಿಟರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜೂನ್ 2021, 11:34 IST
Last Updated 29 ಜೂನ್ 2021, 11:34 IST
ಪ್ರಶಾಂತ್‌ ಭೂಷಣ್‌
ಪ್ರಶಾಂತ್‌ ಭೂಷಣ್‌   

ನವದೆಹಲಿ: ಕೋವಿಡ್‌-19 ಲಸಿಕೆಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತ, ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್‌ಗಳಿಗೆ ‘ದಿಕ್ಕು ತಪ್ಪಿಸುವ ಮಾಹಿತಿ,‘ ಎಂದು ಟ್ವಿಟರ್‌ ಹಣೆಪಟ್ಟಿ ಹಾಕಿದೆ.

ಇದೇ ಕಾರಣಕ್ಕಾಗಿ ಪ್ರಶಾಂತ್‌ ಭೂಷಣ್‌ ಅವರ ಟ್ವಿಟರ್‌ ಖಾತೆಯನ್ನು 12 ಗಂಟೆಗಳ ಕಾಲ ನಿರ್ಬಂಧಿಸಲಾಗಿತ್ತು.

'ಆರೋಗ್ಯವಂತ ಯುವಕರು ಕೋವಿಡ್‌ನಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ಅಥವಾ ಸಾಯುವ ಸಾಧ್ಯತೆ ಇಲ್ಲ. ಆದರೆ, ಲಸಿಕೆಗಳಿಂದಾಗಿ ಅವರು ಸಾಯುವ ಸಾಧ್ಯತೆ ಹೆಚ್ಚಿದೆ. ಲಸಿಕೆಗಳನ್ನು ಪರೀಕ್ಷಿಸದಿರುವುದು ಮತ್ತು ಗಂಭೀರ ಪ್ರತಿಕೂಲ ಪರಿಣಾಮಗಳು ಇರುವುದರ ಹೊರತಾಗಿಯೂ, ಭಿನ್ನ ದೃಷ್ಟಿಕೋನಗಳನ್ನು ತಡೆಯುವ ಪ್ರಯತ್ನಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ,' ಎಂದು ಭೂಷಣ್ ಟ್ವೀಟ್ ಮಾಡಿದ್ದರು. ಮತ್ತೊಂದು ಟ್ವೀಟ್‌ನಲ್ಲಿ, ತಾವು ಲಸಿಕೆ ಸುರಕ್ಷತೆ ಬಗ್ಗೆ ಸಂದೇಹ ಹೊಂದಿರುವುದು ಏಕೆ ವಿವರಿಸುವ ದಾಖಲೆಗಳನ್ನು ಹಂಚಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.