ADVERTISEMENT

ಆಮ್ಲಜನಕ ಪೂರೈಕೆಯಲ್ಲಿ ತಾಂತ್ರಿಕ ದೋಷ; ಇಬ್ಬರು ಕೋವಿಡ್‌ ರೋಗಿಗಳು ಸಾವು

ಪಿಟಿಐ
Published 26 ಏಪ್ರಿಲ್ 2021, 5:04 IST
Last Updated 26 ಏಪ್ರಿಲ್ 2021, 5:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯನಗರಂ(ಆಂಧ್ರಪ್ರದೇಶ): ‘ವಿಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಆಮ್ಲಜನಕ ಪೂರೈಕೆ ಸಂದರ್ಭದಲ್ಲಿ ಆದ ತಾಂತ್ರಿಕ ದೋಷದಿಂದಾಗಿ ಇಬ್ಬರು ಕೋವಿಡ್‌ ರೋಗಿಗಳು ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಆಸ್ಪತ್ರೆಯಲ್ಲಿ 97 ರೋಗಿಗಳಿಗೆ ಆಮ್ಲಜನಕ ನೀಡಲಾಗುತ್ತಿದೆ. ಈ ಪೈಕಿ 12 ಮಂದಿಗೆ ಅವರ ಪರಿಸ್ಥಿತಿಗೆ ಅನುಗುಣವಾಗಿ ಅಧಿಕ ಒತ್ತಡದ ಆಮ್ಲಜನಕವನ್ನು ನೀಡಲಾಗುತ್ತಿದೆ’ ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ರಮಣ ಕುಮಾರಿ ಅವರು ಮಾಹಿತಿ ನೀಡಿದರು.

ಈ ಇಬ್ಬರು ರೋಗಿಗಳನ್ನು ಅಧಿಕ ಒತ್ತಡದ ಆಮ್ಲಜನಕ ಹೊಂದಿರುವ ವೆಂಟಿಲೇಟರ್‌ಗಳಲ್ಲಿ ಇರಿಸಲಾಗಿತ್ತು. ತಡರಾತ್ರಿ ಸುಮಾರು 2–3ಗಂಟೆಗೆ ಅಧಿಕ ಒತ್ತಡದ ಆಮ್ಲಜನಕದಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದೆ. ಇದರಿಂದಾಗಿ ಇಬ್ಬರು ಕೋವಿಡ್‌ ರೋಗಿಗಳು ಸಾವಿಗೀಡಾಗಿದ್ದಾರೆ’ ಎಂದು ಅವರು ತಿಳಿಸಿದರು.

ADVERTISEMENT

‘ಈ ಸಮಸ್ಯೆಯನ್ನು ಸೋಮವಾರ ಮಧ್ಯಾಹ್ನದೊಳಗೆ ಬಗೆಹರಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.