
ಚೆನ್ನೈ: ಸಂಸ್ಕೃತವು ಮೃತ ಭಾಷೆ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಶುಕ್ರವಾರ ಹೇಳಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ‘ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರಸರ್ಕಾರ ₹150 ಕೋಟಿ ಮಾತ್ರ ಮೀಸಲಿರಿಸಿದೆ. ಆದರೆ ಸತ್ತು ಹೋಗಿರುವ ಭಾಷೆ ಸಂಸ್ಕೃತಕ್ಕೆ ₹2,400 ಕೋಟಿ ಮೀಸಲಿರಿಸಲಾಗಿದೆ’ ಎಂದು ಟೀಕಿಸಿದರು.
ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕಿ ತಮಿಳ್ ಇಸೈ ಸೌಂದರರಾಜನ್, ‘ಯಾವುದೇ ಭಾಷೆ ಸತ್ತಿದೆ ಎಂದು ಹೇಳಲು ಯಾರಿಗೂ ಅಧಿಕಾರವಿಲ್ಲ. ಅದರಲ್ಲೂ ದೇಶದಲ್ಲಿ ಈಗಲೂ ಪ್ರಾರ್ಥನೆ ಮತ್ತು ಆಚರಣೆಯಲ್ಲಿ ಬಳಕೆಯಾಗುತ್ತಿರುವ ಭಾಷೆಯನ್ನು ಹಾಗೆ ಕರೆಯಬಾರದು’ ಎಂದು ಹೇಳಿದರು.
‘ಒಂದು ಭಾಷೆಯನ್ನು ಎತ್ತಿ ಹಿಡಿಯಲು ಇನ್ನೊಂದು ಭಾಷೆಯನ್ನು ತಿರಸ್ಕರಿಸುವುದು ಸರಿಯಲ್ಲ. ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಮಾತನಾಡುವಾಗ ನಾಯಕರು ಜವಾಬ್ದಾರಿಯುತರಾಗಿರಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.