
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಭಾನುವಾರ ದಾಖಲೆಯ 9ನೇ ಬಜೆಟ್ ಅನ್ನು ಮಂಡಿಸಿದರು. ಇದರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳು ಹೆಚ್ಚಿನ ಅನುದಾನ ಪಡೆದುಕೊಂಡಿವೆ.
ಮುಂಬರುವ ಏಪ್ರಿಲ್‌ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು, ಈ ರಾಜ್ಯಗಳು ನಿರೀಕ್ಷೆಯಂತೆ ಬಜೆಟ್‌ನಲ್ಲಿ ಸಿಂಹಪಾಲು ಪಡೆದುಕೊಂಡಿವೆ.
ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ಖನಿಜ ಸಮೃದ್ಧ ರಾಜ್ಯಗಳನ್ನು ಗಮನದಲ್ಲಿರಿಸಿಕೊಂಡು ಅಪರೂಪದ ‘ಭೂ ಕಾರಿಡಾರ್’ ಸ್ಥಾಪಿಸುವುದಾಗಿ ಸಚಿವೆ ನಿರ್ಮಲಾ ಘೋಷಣೆ ಮಾಡಿದ್ದಾರೆ.
ಈ ಕಾರಿಡಾರ್‌ಗಳು ಖನಿಜ ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆ ಮತ್ತು ಉತ್ಪಾದನೆಯ ಮೇಲೆ ಗಮನ ಕೇಂದ್ರೀಕರಿಸುತ್ತವೆ ಎಂದರು. 2025ರ ನವೆಂಬರ್‌ನಲ್ಲಿ ಆಯಸ್ಕಾಂತದಂಥ ಶಾಶ್ವತ ಭೂ ಖನಿಜ ಯೋಜನೆ ಪ್ರಾರಂಭಿಸಿದ ನಂತರ, ಉತ್ಪಾದನಾ ವಲಯದಲ್ಲಿ ಭಾರತದ ಸಾಮರ್ಥ್ಯವನ್ನು ಬಲಪಡಿಸುವ ಗುರಿ ಹೊಂದಿದೆ ಎಂದಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಸುರಕ್ಷಿತ ಮತ್ತು ಸುಸ್ಥಿರ ಚಾರಣ ಹಾಗೂ ಪಾದಯಾತ್ರೆಯ ಹಾದಿಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಇದಲ್ಲದೆ, ಅವರು ಒಡಿಶಾ, ಕರ್ನಾಟಕ ಮತ್ತು ಕೇರಳದ ಪ್ರಮುಖ ಆಮೆ ಗೂಡುಕಟ್ಟುವ ಹಾದಿಗಳನ್ನು ಹಾಗೂ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪುಲಿಕಾಟ್ ಸರೋವರದ ಉದ್ದಕ್ಕೂ ಪಕ್ಷಿ ವೀಕ್ಷಣಾ ಹಾದಿಗಳನ್ನು ರಚಿಸಲು ಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದ್ದಾರೆ.
ಮಿಳುನಾಡು, ಪಶ್ಚಿಮ ಬಂಗಾಳ ಸಂಪರ್ಕಿಸುವ ನಗರಗಳು
ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿಗಳನ್ನು ಸಂಪರ್ಕಿಸುವ ನಗರಗಳ ನಡುವೆ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ ಎಂದು ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ದುರ್ಗಾಪುರದಲ್ಲಿ 'ಉತ್ತಮ ಸಂಪರ್ಕ' ಹೊಂದಿರುವ ಸಮಗ್ರ ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಯನ್ನೂ ಅವರು ಪ್ರಸ್ತಾಪಿಸಿದರು. ಅವರು ಈಶಾನ್ಯ ರಾಜ್ಯಗಳಲ್ಲಿ ಐದು ಪ್ರವಾಸಿ ತಾಣಗಳನ್ನು ನಿರ್ಮಿಸುವು ಗುರಿ ಹೊಂದಲಾಗಿದೆ.
ಅಸ್ಸಾಂ: ಬೌದ್ಧ ಸರ್ಕೀಟ್‌ಗಳ ಅಭಿವೃದ್ಧಿ
ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಗಳಲ್ಲಿ ಬೌದ್ಧ ಸರ್ಕೀಟ್‌ಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆ ಒಂದನ್ನು ಪ್ರಾರಂಭಿಸಲು ಸರ್ಕಾರ ಪ್ರಸ್ತಾಪಿಸಿರುವುದಾಗಿಯೂ ತಿಳಿಸಿದ್ದಾರೆ..
ಆರ್ಥಿಕ ಬೆಳವಣಿಗೆ ವೇಗ ನೀಡುವುದು, ಉತ್ತೇಜಿಸುವುದು ಸರ್ಕಾರದ ಕರ್ತವ್ಯ ಎಂದು ಸೀತಾರಾಮನ್ ಹೇಳಿದರು. ಜೊತೆಗೆ ಬಡವರು, ದೀನದಲಿತರು ಮತ್ತು ಬಡತನ ರೇಖೆಗಿಂತ ಕೆಳಗಿನವರ ಮೇಲೆ ಕೇಂದ್ರೀಕರಿಸುವುದು ಇದರ ಉದ್ದೇಶ ಎಂದು ಅವರು ಒತ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.