ADVERTISEMENT

ಬಜೆಟ್‌ ಅಧಿವೇಶನ: 'ಪೆಗಾಸಸ್' ಖರೀದಿ, ಎಂಎಸ್‌ಪಿ ಬಗ್ಗೆ ಚರ್ಚೆಗೆ ಎಎಪಿ ಬೇಡಿಕೆ

ಪಿಟಿಐ
Published 31 ಜನವರಿ 2022, 15:44 IST
Last Updated 31 ಜನವರಿ 2022, 15:44 IST
   

ನವದೆಹಲಿ: ಸೋಮವಾರ (ಜನವರಿ31 ರಂದು)ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪೆಗಾಸಸ್‌ ಬೇಹುಗಾರಿಕಾ ತಂತ್ರಾಂಶ ವಿಚಾರ ಪ್ರಸ್ತಾಪಿಸಿದ ಆಮ್‌ ಆದ್ಮಿ ಪಕ್ಷ (ಎಎಪಿ), ಸಂಸತ್‌ನಲ್ಲಿ ನಡೆಯುತ್ತಿರುವ ಕೇಂದ್ರ ಬಜೆಟ್‌ ಅಧಿವೇಶನದ ವೇಳೆ ಈ ಬಗ್ಗೆಚರ್ಚೆ ನಡೆಸಬೇಕುಎಂದು ಒತ್ತಾಯಿಸಿದೆ.

ಬಜೆಟ್‌ ಅಧಿವೇಶನದ ಕಾರ್ಯಸೂಚಿಕುರಿತು ಚರ್ಚಿಸಲುರಾಜ್ಯಸಭೆ ಮುಖ್ಯಸ್ಥ ಎಂ. ವೆಂಕಯ್ಯ ನಾಯ್ಡು ಅವರುವರ್ಚುವಲ್‌ ಆಗಿ ಸಭೆ ಕರೆದಿದ್ದರು.

2017ರಲ್ಲಿ ಇಸ್ರೇಲ್‌ ಜೊತೆ ಮಾಡಿಕೊಂಡರಕ್ಷಣಾ ಒಪ್ಪಂದದ ಭಾಗವಾಗಿಭಾರತವು ಪೆಗಾಸಸ್‌ ತಂತ್ರಾಂಶ ಖರೀದಿಸಿದೆ ಎಂದು 'ನ್ಯೂ ಯಾರ್ಕ್‌ ಟೈಮ್ಸ್‌' ವರದಿಪ್ರಕಟಿಸಿತ್ತು.ಅದಾದಬಳಿಕಪೆಗಾಸಸ್‌ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ADVERTISEMENT

'ಪೆಗಾಸಸ್‌'ಮಾತ್ರವಲ್ಲದೆ, ದೇಶದಲ್ಲಿ ರಾಷ್ಟ್ರಪಿತಮಹಾತ್ಮಗಾಂಧೀಜಿ ಅವರನ್ನು ಅವಮಾನಿಸುವ ಪ್ರಕರಣಗಳಿಗೆ ಕಡಿವಾಣಹಾಕಬೇಕು ಮತ್ತು ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಪಡಿಸುವ ಕಾನೂನು ಜಾರಿಗೊಳಿಸಬೇಕುಎಂದೂ ಎಎಪಿ ಆಗ್ರಹಿಸಿದೆ.

ಎಎಪಿಯ ರಾಜ್ಯಸಭೆ ಸದಸ್ಯ ಸಂಜಯ್‌ ಸಿಂಗ್‌ ಅವರು, ಜಿಎಸ್‌ಟಿ ಸಂಗ್ರಹದಲ್ಲಿ ದೆಹಲಿ ಸರ್ಕಾರಕ್ಕೆ ಬರಬೇಕಿರುವ ಪಾಲು ₹ 12,000 ಕೋಟಿಅನ್ನು ಕೂಡಲೇಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ ಮೂಲಕ ಮಾಹಿತಿ ನೀಡಿರುವ ಸಂಜಯ್‌ ಸಿಂಗ್‌, 'ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಮ್ಮುಖದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಎಂಎಸ್‌ಪಿ ಖಾತರಿ ಕಾನೂನು, ಮಹಾತ್ಮ ಗಾಂಧೀಜಿ ಅವರನ್ನು ಅವಮಾನಿಸುವುದಕ್ಕೆ ತಡೆ,ಜಿಎಸ್‌ಟಿಹಂಚಿಕೆಯಲ್ಲಿದೆಹಲಿ ಸರ್ಕಾರಕ್ಕೆ ನೀಡಬೇಕಿರುವ₹ 12,000 ಕೋಟಿಪಾವತಿಸುವುದು ಮತ್ತು ಪೆಗಾಸಸ್‌ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಲಾಗಿದೆ' ಎಂದುತಿಳಿಸಿದ್ದಾರೆ.

ಇಂದಿನಿಂದ (ಜನವರಿ 31ರಿಂದ) ಆರಂಭವಾಗಿರುವ ಕೇಂದ್ರಬಜೆಟ್‌ ಅಧಿವೇಶನವು, ಏಪ್ರಿಲ್‌8ರ ವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಮುಕ್ತಾಯದ ಬಳಿಕ ಫೆಬ್ರುವರಿ12 ರಿಂದ ಮಾರ್ಚ್‌13ರ ವರೆಗೆ ವಿರಾಮವಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.