ಈ ಹಿಂದೆ 12 ದೇಶಗಳಿಂದ ಬಂದ ಪ್ರಯಾಣಿಕರನ್ನು ಮಾತ್ರ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಯಾವುದೇ ದೇಶದಿಂದ ಬರುವ ಎಲ್ಲಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುವುದುಎಂದು ಸಚಿವರು ಹೇಳಿದ್ದಾರೆ.
ಕೋವಿಡ್ 19 ವೈರಸ್ ಸೋಂಕು ಬಗ್ಗೆ ಬುಧವಾರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಸಚಿವರು ಆಗ್ರಾದಲ್ಲಿನ ಕುಟುಂಬವೊಂದರ 6 ಸದಸ್ಯರಿಗೆ ಸೋಂಕು ತಗಲಿದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಇಟಲಿಯ 21 ಪ್ರಜೆಗಳ ಪೈಕಿ 14 ಮಂದಿಗೆ ವೈರಸ್ ಸೋಂಕು ತಗಲಿದೆ. ಅದೇಜೈಪುರದಲ್ಲಿರುವಇಟಲಿಯ ಪ್ರವಾಸಿಗರಿಬ್ಬರಿಗೆಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.