ADVERTISEMENT

ರವಿಶಂಕರ್ ಪ್ರಸಾದ್‌ಗೆ ಕಪ್ಪು ಬಾವುಟದ ಸ್ವಾಗತ

ಪಿಟಿಐ
Published 26 ಮಾರ್ಚ್ 2019, 19:30 IST
Last Updated 26 ಮಾರ್ಚ್ 2019, 19:30 IST
ಆರ್.ಕೆ. ಸಿನ್ಹಾ ಅವರ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿದರು ಪಿಟಿಐ ಚಿತ್ರ
ಆರ್.ಕೆ. ಸಿನ್ಹಾ ಅವರ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿದರು ಪಿಟಿಐ ಚಿತ್ರ   

ಪಟ್ನಾ :ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ,ಮಂಗಳವಾರ ಮೊದಲ ಬಾರಿ ಪಟ್ನಾಕ್ಕೆ ಭೇಟಿ ನೀಡಿದ ರವಿಶಂಕರ್ ಪ್ರಸಾದ್ ಅವರಿಗೆ, ಕಪ್ಪುಬಾವುಟದ ಸ್ವಾಗತ ದೊರಕಿತು.

ಕೇಂದ್ರ ಸಚಿವರವಿಶಂಕರ್ ಪ್ರಸಾದ್ ಅವರು ಪಟ್ನಾ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ, ರಾಜ್ಯಸಭಾ ಸದಸ್ಯರೂ ಆಗಿರುವಬಿಜೆಪಿಯ ಮತ್ತೊಬ್ಬ ನಾಯಕ ಆರ್.ಕೆ. ಸಿನ್ಹಾ ಅವರ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿದರು. ಇದರಿಂದಾಗಿ ಸಿನ್ಹಾ ಮತ್ತುರವಿಶಂಕರ್ ಪ್ರಸಾದ್ ಬೆಂಬಲಿಗರ ನಡುವೆ ಸಂಘರ್ಷ ಉಂಟಾಯಿತು. ಬಳಿಕ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಎರಡೂ ಕಡೆಯವರನ್ನು ಸಮಾಧಾನಗೊಳಿಸಿದರು. ಆದರೆ ಯಾರನ್ನಾದರೂ ವಶಕ್ಕೆ ಪಡೆದಿರುವ ಕುರಿತು ಮಾಹಿತಿ ದೊರಕಿಲ್ಲ.

ಇದೇ ವೇಳೆವಿಮಾನ ನಿಲ್ದಾಣದಹೊರಗೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ರವಿಶಂಕರ್ ಪ್ರಸಾದ್, ‘ಮಹತ್ತರ ಹೊಣೆ ನೀಡಿದ ನನ್ನ ಪಕ್ಷಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಮತ್ತು ಈ ಹೊಣೆಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತೇನೆ. ಬಿಜೆಪಿಯ ಉತ್ತಮ ಆಡಳಿತ ಹಾಗೂ ದೇಶದ ಕುರಿತು ಇರುವ ಬದ್ಧತೆ, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಮರಳಲು ನೆರವಾಗಲಿದೆ‘ ಎಂದಿದ್ದಾರೆ.

ADVERTISEMENT

ಸಿನ್ಹಾ ಅವರು,ಪಟ್ನಾ ಸಾಹಿಬ್ ಕ್ಷೇತ್ರದಿಂದ ತಮಗೆ ಟಿಕೆಟ್ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಬಿಜೆ‍ಪಿ ಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ. ಪ್ರಸ್ತುತ, ಬಿಜೆಪಿ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಅವರು ಈ ಕ್ಷೇತ್ರದ ಸಂಸದರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.