ADVERTISEMENT

ಅಕಾಲಿಕ ಮಳೆ: ಕೊಯ್ಲು ಮುಂದೂಡಲು ರೈತರಿಗೆ ಸಲಹೆ

ಪಿಟಿಐ
Published 18 ಮಾರ್ಚ್ 2023, 13:57 IST
Last Updated 18 ಮಾರ್ಚ್ 2023, 13:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಕಾಲಿಕ ಮಳೆಯು ಮುಂದಿನ ಕೆಲ ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದ್ದು, ಪಂಜಾಬ್‌, ಹರಿಯಾಣ ಮತ್ತು ಮಧ್ಯಪ್ರದೇಶದ ರೈತರು ಗೋಧಿ ಮತ್ತು ಹಿಂಗಾರು ಬೆಳೆಗಳ ಕೊಯ್ಲನ್ನು ಮುಂದೂಡುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಸಲಹೆ ನೀಡಿದೆ.

ಕೆಲವು ರಾಜ್ಯಗಳಲ್ಲಿ ಕೊಯ್ಲಿಗೆ ಬಂದಿರುವ ಸಾಸಿವೆ, ಕಡಲೆ ಮೊದಲಾದ ಬೆಳೆಗಳನ್ನು ಶೀಘ್ರ ಕೊಯ್ಲು ಮಾಡಿ, ಫಸಲನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿಡಬೇಕು ಎಂದೂ ಹೇಳಿದೆ.

ಮಳೆ ಬರುವ ಸಾಧ್ಯತೆ ಇರುವುದರಿಂದ ಗೋಧಿ ಬೆಳೆಗೆ ನೀರು ಹಾಯಿಸುವುದನ್ನು ನಿಲ್ಲಿಸಬೇಕು ಎಂದೂ ತಿಳಿಸಿದೆ.

ADVERTISEMENT

ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್‌ ಮತ್ತು ಆಂಧ್ರ ಪ್ರದೇಶದ ರಾಯಲಸೀಮೆಯಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.