ADVERTISEMENT

ಯಮುನಾ ನದಿಯಲ್ಲಿ ದೋಣಿ ದುರಂತ: ಮತ್ತೆ ಏಳು ಮೃತದೇಹ ಪತ್ತೆ

ಪಿಟಿಐ
Published 13 ಆಗಸ್ಟ್ 2022, 11:25 IST
Last Updated 13 ಆಗಸ್ಟ್ 2022, 11:25 IST
ಉತ್ತರಪ್ರದೇಶದ ಬಂದಾ ಪ್ರದೇಶದಲ್ಲಿನ ಯಮುನಾ ನದಿಯಲ್ಲಿ ದೋಣಿ ದುರಂತ ಸಂಭವಿಸಿದ ಸ್ಥಳದಲ್ಲಿ ನೆರೆದಿರುವ ಜನರು –ಪಿಟಿಐ ಚಿತ್ರ
ಉತ್ತರಪ್ರದೇಶದ ಬಂದಾ ಪ್ರದೇಶದಲ್ಲಿನ ಯಮುನಾ ನದಿಯಲ್ಲಿ ದೋಣಿ ದುರಂತ ಸಂಭವಿಸಿದ ಸ್ಥಳದಲ್ಲಿ ನೆರೆದಿರುವ ಜನರು –ಪಿಟಿಐ ಚಿತ್ರ   

ಬಂದಾ/ಫತೇಪುರ್:ಉತ್ತರಪ್ರದೇಶದ ಬಂದಾ ಜಿಲ್ಲೆಯ ಯಮುನಾ ನದಿಯಲ್ಲಿ ಗುರುವಾರ ಸಂಭವಿಸಿದ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಮತ್ತೆ ಏಳು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಮೃತರ ಸಂಖ್ಯೆ 10ಕ್ಕೇ ಏರಿಕೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ದುರಂತದಲ್ಲಿ 17 ಜನರು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ.

‘ಶವಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಘಟನೆ ನಡೆದ 15–20 ಕಿ.ಮೀದೂರದಲ್ಲಿ ಶವಗಳು ಪತ್ತೆಯಾಗಿವೆ’ ಎಂದು ಕೃಷ್ಣಾಪುರ ಪೊಲೀಸ್ ಠಾಣೆ ಠಾಣಾಧಿಕಾರಿ ಸಂಜಯ್ ತಿವಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

30ಕ್ಕೂ ಹೆಚ್ಚು ಜನರನ್ನು ಹೊತ್ತ ದೋಣಿಯು ಮಾರ್ಕಾದಿಂದ ಫತೇಪುರ್‌ ಜಿಲ್ಲೆಯ ಜರೌಲಿ ಘಾಟ್ ಕಡೆಗೆ ಸಾಗುತ್ತಿದ್ದಾಗ ಬಲವಾದ ಗಾಳಿಗೆ ಭಾರಿ ಅಲೆಗಳು ಎದ್ದು ದೋಣಿ ಮಗುಚಿತ್ತು. 13 ಮಂದಿ ಈಜಿ ದಡ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.