
ಯೋಗಿ ಆದಿತ್ಯನಾಥ
(ಪಿಟಿಐ ಚಿತ್ರ)
ಲಖನೌ: ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು ದಾಖಲೆಯ ₹ 9.12 ಲಕ್ಷ ಕೋಟಿ ಗಾತ್ರದ ರಾಜ್ಯ ಬಜೆಟ್ ಅನ್ನು ಬುಧವಾರ (ಫೆ.11) ಮಂಡಿಸಿದ್ದಾರೆ.
ಬಜೆಟ್ ಬೆನ್ನಲ್ಲೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿರುವ ತಮ್ಮ ಖಾತೆಯ ಕವರ್ ಚಿತ್ರ ಬದಲಿಸಿಕೊಂಡಿದ್ದಾರೆ. ಬ್ರಹ್ಮೋಸ್ ಕ್ಷಿಪಣಿ ಪಕ್ಕದಲ್ಲಿ ನಿಂತಿರುವ ಚಿತ್ರವನ್ನು ಹಂಚಿಕೊಂಡಿರುವ ಅವರು, ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಹಾಗೂ ಕಾರ್ಯತಂತ್ರದ ಸಾಮರ್ಥ್ಯ ಉತ್ತೇಜನಕ್ಕೆ ಒತ್ತು ನೀಡುವ ಸಂದೇಶ ರವಾನಿಸಿದ್ದಾರೆ.
ಇದಲ್ಲದೆ, 2026–27ನೇ ಸಾಲಿನ ಈ ಬಜೆಟ್‌ನಲ್ಲಿ ವಿದ್ಯಾರ್ಥಿಗಳು, ರೈತರು, ಮಹಿಳೆಯರು ಮತ್ತು ಯುವಕರಿಗಾಗಿ ಏನೆಲ್ಲ ನೀಡಲಾಗಿದೆ, ಮೂಲಸೌಕರ್ಯ ಅಭಿವೃದ್ಧಿಗೆ ಘೋಷಣೆಯಾಗಿರುವ ಹೊಸ ಯೋಜನೆಗಳು ಏನು ಎಂಬ ಪ್ರಮುಖಾಂಶಗಳು ಇಲ್ಲಿವೆ.
ವಿದ್ಯಾರ್ಥಿಗಳಿಗಾಗಿ..
ಮೂರು ಹೊಸ ವಿಶ್ವವಿದ್ಯಾಲಯಗಳು
16 ವೈದ್ಯಕೀಯ ಕಾಲೇಜುಗಳು
ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ 12.5–15ರಷ್ಟು ಮೀಸಲು
ರೈತರಿಗಾಗಿ..
ಕೊಳವೆ ಬಾವಿಗಳಿಗೆ ಉಚಿತ ವಿದ್ಯುತ್
ಶೇ 50ರ ಸಬ್ಸಿಡಿಯಲ್ಲಿ ಜಾನುವಾರು ವಿಮೆ
ಮೂಲಸೌಕರ್ಯ..
ಬಜೆಟ್ ಮೊತ್ತದ ಶೇ 25ರಷ್ಟು ಮೂಲಸೌಕರ್ಯಕ್ಕೆ
ಕಾರಿಡಾರ್ ಯೋಜನೆಗಳಿಗೆ ₹ 34,000 ಕೋಟಿ
ಜೆವಾರ್ ವಿಮಾನ ನಿಲ್ದಾಣ ಮೇಲ್ದರ್ಜೆಗೆ (2 – 5 ರನ್‌ವೇ ನಿರ್ಮಾಣಕ್ಕೆ ಯೋಜನೆ)
₹ 225 ವೆಚ್ಚದಲ್ಲಿ ಉತ್ತರ ಪ್ರದೇಶ ಎಐ ಮಿಷನ್
ಎಂಟು ಡೇಟಾ ಸೆಂಟರ್ ಪಾರ್ಕ್ ನಿರ್ಮಾಣ ಗುರಿ
ಮಹಿಳೆಯರು ಮತ್ತು ಯುವಕರಿಗಾಗಿ..
ವಿವಾಹ ನೆರವು ₹ 1 ಲಕ್ಷಕ್ಕೆ
ಮಹಿಳೆಯರಿಗಾಗಿ ಕ್ರೆಡಿಟ್ ಕಾರ್ಡ್ ಯೋಜನೆ – ಬಡ್ಡಿರಹಿತ ಸಾಲ
10 ಲಕ್ಷ ಉದ್ಯೋಗ ಸೃಷ್ಟಿ ಗುರಿ
ಸ್ಟಾರ್ಟ್‌ಆಪ್ ಆರಂಭಿಸುವ ಯುವಕರಿಗಾಗಿ ₹ 5 ಲಕ್ಷದ ವರೆಗೆ ಸಾಲ
ಸರ್ಕಾರದ ಸಾಧನೆಗಳು
9 ವರ್ಷಗಳಲ್ಲಿ ಯಾವುದೇ ಹೊಸ ತೆರಿಗೆ ವಿಧಿಸದ ಯೋಗಿ ಸರ್ಕಾರ
₹ 50 ಲಕ್ಷಕೋಟಿಗೂ ಅಧಿಕ ಹೂಡಿಕೆಗೆ ಒಪ್ಪಂದ
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲಿ 3.11 ಕೋಟಿ ಜನರಿಗೆ ಉದ್ಯೋಗ
2025ರ ಜನವರಿಯಿಂದ ಜೂನ್‌ವರೆಗೆ 122 ಕೋಟಿ ಪ್ರವಾಸಿಗರು ರಾಜ್ಯಕ್ಕೆ ಭೇಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.