ADVERTISEMENT

ಉತ್ತರಪ್ರದೇಶ: ಸಂಭಲ್‌ನಲ್ಲಿ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ

ಪಿಟಿಐ
Published 13 ಜನವರಿ 2025, 13:48 IST
Last Updated 13 ಜನವರಿ 2025, 13:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಂಭಲ್‌, ಉತ್ತರಪ್ರದೇಶ: ಇಲ್ಲಿನ ಚಂದೌಸಿ ಪಟ್ಟಣದಲ್ಲಿ ತಲೆ ಎತ್ತಿರುವ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಉದ್ಘಾಟಿಸುವ ನಿರೀಕ್ಷೆಯಿದೆ.

ರಾಮ್‌ಲೀಲಾ ಮೈದಾನದಲ್ಲಿರುವ ರಾಮ್‌ ಬಾಗ್‌ ಧಾಮದಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆಯ ಒಂದು ಕೈಯಲ್ಲಿ ಬಿಲ್ಲು ಇದ್ದರೆ, ಮತ್ತೊಂದು ಕೈಯಲ್ಲಿ ಭಕ್ತರನ್ನು ಆಶೀರ್ವದಿಸುವ ಸ್ಥಿತಿಯಲ್ಲಿದೆ. 

‘2023ರ ಮೇ 31ರಂದು ಪ್ರತಿಮೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಅಂತಿಮ ಹಂತದಲ್ಲಿದೆ’ ಎಂದು ರಾಮ್‌ ಬಾಗ್‌ ಧಾಮ್‌ ಟ್ರಸ್ಟ್‌ನ ಅಧ್ಯಕ್ಷ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

‘ಪ್ರತಿಮೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಬಣ್ಣ ಬಳಿಯುವ ಕಾರ್ಯ ಉಳಿದಿದ್ದು, ಫೆಬ್ರುವರಿ ವೇಳೆಗೆ ಸಿದ್ಧಗೊಳ್ಳಲಿದೆ’ ಎಂದರು.

‘₹25 ಲಕ್ಷ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತಿದ್ದು, ದೇವರಿಗೆ ನಮಿಸಲು ಪರಿಕ್ರಮ ಪಥ ನಿರ್ಮಿಸಲಾಗಿದೆ. ಅಶೋಕವನದ ಜೊತೆಗೆ ಹನುಮಂತ, ಗರುಡನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಗಾತ್ರದಲ್ಲಿ ದೇಶದಲ್ಲಿಯೇ ಅತೀ ಎತ್ತರದ್ದು’ ಎಂದು ಅಶೋಕ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.