ADVERTISEMENT

ರಾಹುಲ್‌ ಅವರ ನಿರೋಧಕ ಶಕ್ತಿ ಮೂಲದ ಕುರಿತು ತಜ್ಞರ ಅಭಿಪ್ರಾಯ ಪಡೆಯುವೆ: ಬ್ರಿಜೇಶ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 19:45 IST
Last Updated 5 ಜನವರಿ 2023, 19:45 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಲಖನೌ: ‘ಭಾರತ್‌ ಜೋಡೊ ಯಾತ್ರೆ’ ವೇಳೆ ರಾಹುಲ್‌ ಗಾಂಧಿ ಅವರು ಕೊರೆಯುವ ಚಳಿಯಲ್ಲೂ ಟಿ ಶರ್ಟ್‌ ಧರಿಸಿದ್ದನ್ನು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ‘ರಾಹುಲ್‌ ಅವರ ನಿರೋಧಕ ಶಕ್ತಿಯ ಮೂಲದ ಕುರಿತು ನಾನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ’ ಎಂದು ಉತ್ತರಪ್ರದೇಶದ ಆರೋಗ್ಯ ಸಚಿವ ಬ್ರಿಜೇಶ್‌ ಪಾಠಕ್‌ ಅವರು ಗುರುವಾರ ಹೇಳಿದರು.

ರಾಹುಲ್‌ ಅವರು ಟಿ ಶರ್ಟ್‌ ಧರಿಸಿ ಯಾತ್ರೆಯಲ್ಲಿ ಪಾಲ್ಗೊಂಡ ವಿಚಾರವನ್ನು ಮಾಧ್ಯಮದವರು ಉಲ್ಲೇಖಿಸಿದ ಬಳಿಕ ಪ್ರತಿಕ್ರಿಯಿಸಿದ ಪಾಠಕ್‌ ಅವರು, ‘ಈ ಕುರಿತು ನಾನೂ ಮಾಧ್ಯಮಗಳ ವರದಿಗಳನ್ನು ನೋಡಿದ್ದೇನೆ. 3ರಿಂದ 4 ಡಗ್ರಿಯ ಚಳಿಯಲ್ಲೂ ವ್ಯಕ್ತಿಯೊಬ್ಬ ಕೇವಲ ಟಿ ಶರ್ಟ್‌ ಧರಿಸುವುದು ಹೇಗೆ ಸಾಧ್ಯ ಎಂಬುದನ್ನು ತಿಳಿಯುವುದು ಮುಖ್ಯ. ಈ ಬಗ್ಗೆ ಆರೋಗ್ಯ ತಜ್ಞರಿಂದ ಉತ್ತರ ಪಡೆಯಲು ಪ್ರಯತ್ನಿಸಿದೆ’ ಎಂದರು.

‘ಇಂಥ ಚಳಿಯಲ್ಲೂ ರಾಹುಲ್‌ ಅವರು ಟಿ ಶರ್ಟ್‌ ಧರಿಸುವ ಮೂಲಕ, ಅವರು ಯಾವಾಗಲೂ ಜನ ಸಾಮಾನ್ಯರಿಗೆ ವಿರುದ್ಧವಾದ ಕೆಲಸ ಮಾಡುತ್ತಾರೆ ಎಂಬುದನ್ನು ನಿರೂಪಿಸಿದ್ದಾರೆ’ ಎಂದೂ ಅವರು ಹೇಳಿದರು.

ADVERTISEMENT

‘ಹಿಂದಿನ ಕಾಲದಲ್ಲಿ ರಾಜರು ಸಾಮಾನ್ಯ ಜನರಿಗಿಂತ ಭಿನ್ನವಾದ ಉಡುಪು ಧರಿಸುತ್ತಿದ್ದರು. ಅದರಂತೆಯೇ, ರಾಹುಲ್‌ ಅವರು ತಮ್ಮನ್ನು ರಾಜ ಎಂದು ಪರಿಗಣಿಸಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.