ADVERTISEMENT

ಜನರನ್ನು ಅಪಹಾಸ್ಯ ಮಾಡದೆ ಹೃದಯ ಗೆ‌ಲ್ಲುವುದೇ ನಿಜವಾದ ಕಲೆ: ಸಚಿವ ಅಸಿಮ್‌ ಅರುಣ್‌

ಪಿಟಿಐ
Published 15 ಫೆಬ್ರುವರಿ 2025, 2:32 IST
Last Updated 15 ಫೆಬ್ರುವರಿ 2025, 2:32 IST
<div class="paragraphs"><p>ಸಮಯ್ ರೈನಾ</p></div>

ಸಮಯ್ ರೈನಾ

   

–ಇನ್‌ಸ್ಟಾಗ್ರಾಮ್ ಚಿತ್ರ

ಲಖನೌ: ಹಾಸ್ಯ ಕಲಾವಿದರು ಚಿಂತನೆಗಳನ್ನು ಪ್ರಚೋದಿಸುವುದು ಹಾಗೂ ಗೌರವ ಕಾಪಾಡಿಕೊಳ್ಳುವುದರ ನಡುವೆ ಸಮತೋಲವನ್ನು ಕಾಪಾಡಿಕೊಳ್ಳಬೇಕು. ಜನರನ್ನು ಅಪಹಾಸ್ಯ ಮಾಡದೆ ಹೃದಯ ಗೆ‌ಲ್ಲುವುದೇ ನಿಜವಾದ ಕಲಾವಿದನ ಲಕ್ಷಣ ಎಂದು ಉತ್ತರಪ್ರದೇಶದ ಸಚಿವ ಅಸಿಮ್‌ ಅರುಣ್‌ ಹೇಳಿದ್ದಾರೆ.

ADVERTISEMENT

ಸಮಯ್‌ ರೈನಾ ಅವರು ನಡೆಸಿಕೊಡುವ 'ಇಂಡಿಯಾ ಗಾಟ್‌ ಲೆಟೆಂಟ್‌' ರಿಯಾಲಿಟಿ ಶೋನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಕೋರಿ ಯುಟ್ಯೂಬರ್ ರಣವೀರ್‌ ಇಲಾಹಾಬಾದಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಫೇಸ್‌ಬುಕ್‌ ಪುಟದಲ್ಲಿ ಅಸಿಮ್‌ ಅರುಣ್‌ ಪೋಸ್ಟ್‌ ಹಂಚಿಕೊಂಡಿದ್ದು, ಹಾಸ್ಯವು ಯಾರೊಬ್ಬರ ವೈಯಕ್ತಿಕ ಸಂದರ್ಭಗಳು, ವೈಯಕ್ತಿಕ ವಿಚಾರಗಳು, ಅವರು ಎದುರಿಸುವ ಸವಾಲುಗಳನ್ನು ಅಪಹಾಸ್ಯ ಮಾಡುವುದು ಸರಿಯಲ್ಲ. ನಿಜವಾದ ಸವಾಲು ಎಂದರೆ ಗೌರವಪೂರಕವಾಗಿ ಚಿಂತನೆಗಳನ್ನು ಬಿತ್ತರಿಸುವುದಾಗಿದೆ ಎಂದು ತಿಳಿಸಿದ್ದಾರೆ.

‘ನಾವು ಚಿಕ್ಕವರಿದ್ದಾಗ, ಬೋಳು ತಲೆ, ಬೊಜ್ಜು ಮತ್ತು ಅಂತಹದ್ದೇ ವಿಷಯಗಳ ಬಗ್ಗೆ ಹಾಸ್ಯ ಮಾಡುವುದು ತುಂಬಾ ಸಾಮಾನ್ಯವಾಗಿತ್ತು. ಅದೃಷ್ಟವಶಾತ್, ಇಂದು ಸಮಾಜವು ಹೆಚ್ಚು ಸಂವೇದನಾಶೀಲವಾಗಿದೆ.ಅಂತಹ ಅಪಹಾಸ್ಯವು ಫ್ಯಾಷನ್‌ನಿಂದ ಮಾಯವಾಗಿದೆ. ದುಃಖಕರವೆಂದರೆ, ಕೆಲವರು ಮತ್ತೆ ಸಂವೇದನಾಶೀಲರಾಗಿಲ್ಲ ಎಂದು ಅಸಿಮ್‌ ಹೇಳಿದ್ದಾರೆ.

‘ಅಂಗವೈಕಲ್ಯ, ಬಡತನ, ಬಟ್ಟೆ, ಭಾಷೆ ಸೇರಿದಂತೆ ಯಾವುದೇ ವಿಷಯಗಳ ಮೇಲೂ ಅಪಹಾಸ್ಯ ಮಾಡುವುದು ಕಲಾವಿದನ ಕಲೆಯ ಮೂಲತತ್ವವನ್ನೇ ಪ್ರಶ್ನಿಸುತ್ತದೆ . ಹಾಸ್ಯವು ಯಾರೊಬ್ಬರ ವೈಯಕ್ತಿಕ ವಿಚಾರಗಳನ್ನು ಅಪಹಾಸ್ಯ ಮಾಡುವುದರ ಮೇಲೆ ಅವಲಂಬಿತವಾಗಬೇಕೇ? ನೋವುಂಟುಮಾಡುವ ವಿಷಯಗಳನ್ನು ಹೇಳುವ ಮೂಲಕ ಮಾತ್ರ ಹಾಸ್ಯವನ್ನು ಮಾಡಲು ಸಾಧ್ಯವೇ? ಹಾಸ್ಯನಟರಿಗೆ ಇರುವ ಸವಾಲು ಎಂದು ಅಸಿಮ್‌ ತಿಳಿಸಿದ್ದಾರೆ.

ಪೋಷಕರು ಮತ್ತು ಲೈಂಗಿಕತೆಯ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕಿರುವ ಇನ್‌ಫ್ಲುಯೆನ್ಸರ್, ಯೂಟ್ಯೂಬರ್ ರಣವೀರ್ ಇಲಾಹಾಬಾದಿಯಾ ವಿರುದ್ಧ ಗುವಾಹಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆನ್‌ಲೈನ್ ಶೋನಲ್ಲಿ ಅಶ್ಲೀಲತೆ ಪ್ರಚಾರಕ್ಕೆ ಸಂಬಂಧಿಸಿದಂತೆ ನಗರದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ರಣವೀರ್ ಇಲಾಹಾಬಾದಿಯಾ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

31 ವರ್ಷದ ಪಾಡ್‌ಕಾಸ್ಟರ್ ರಣವೀರ್ ಅಲ್ಲದೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ, ಆಶಿಶ್ ಚಂಚಲಾನಿ, ಜಸ್‌ಪ್ರೀತ್ ಸಿಂಗ್ ಮತ್ತು ಅಪೂರ್ವ ಮಖಿಜಾ ವಿರುದ್ಧ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.