
ಸಿಎಂ ಯೋಗಿ ಆದಿತ್ಯನಾಥ್
ಪಿಟಿಐ ಚಿತ್ರ
ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಮುಸ್ತಫಾಬಾದ್ ಗ್ರಾಮದ ಹೆಸರನ್ನು ‘ಕಬೀರ್‌ಧಾಮ್’ ಎಂದು ಮರುನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಂತ ಕಬೀರ್ ಅವರೊಂದಿಗೆ ನಂಟು ಹೊಂದಿರುವ ಪ್ರದೇಶದ ಇತಿಹಾಸ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸಲು ಗ್ರಾಮದ ಹೆಸರನ್ನು ಮರುನಾಮಕರಣ ಮಾಡಿರುವುದಾಗಿ ಸರ್ಕಾರ ಹೇಳಿದೆ.
ಸ್ಮೃತಿ ಮಹೋತ್ಸವ ಮೇಳ 2025 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ‘ಈ ಹಿಂದೆ ಕಬ್ರಿಸ್ತಾನದ ಗಡಿ ಗೋಡೆಗಳನ್ನು ನಿರ್ಮಿಸುವುದಕ್ಕೆ ವ್ಯಯವಾಗುತ್ತಿದ್ದ ಹಣವನ್ನು ನಮ್ಮ ಸರ್ಕಾರ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ತಾಣಗಳನ್ನು ಪುನರುಜ್ಜೀವನಗೊಳಿಸಲು ಬಳಸುತ್ತಿದೆ’ ಎಂದರು.
ಗ್ರಾಮವೊಂದಕ್ಕೆ ಮುಸ್ತಫಾಬಾದ್ ಎಂಬ ಹೆಸರಿರುವುದು ಅಚ್ಚರಿ ಮೂಡಿಸಿತ್ತು. ಈ ಗ್ರಾಮದಲ್ಲಿ ಎಷ್ಟು ಜನ ಮುಸ್ಲಿಂ ಸಮುದಾಯದವರು ಇರುತ್ತಾರೆ ಎಂದು ಕೇಳಿದಾಗ ಯಾವೊಬ್ಬ ಮುಸ್ಲಿಂ ಧರ್ಮದ ವ್ಯಕ್ತಿಯೂ ಇಲ್ಲ ಎನ್ನುವ ಮಾಹಿತಿ ಸಿಕ್ಕಿತ್ತು. ಆ ಬಳಿಕ ಗ್ರಾಮದ ಹೆಸರನ್ನು ಬದಲಿಸಲು ಸೂಚಿಸಿದ್ದೆ. ಗ್ರಾಮದ ಹೆಸರು ಬದಲಿಸಲು ಇರುವ ಎಲ್ಲಾ ಪ್ರಕ್ರಿಯೆಯನ್ನು ಪೂರೈಸಿದ ಬಳಿಕ ಕಬೀರ್‌ಧಾಮ್ ಎಂದು ಹೆಸರಿಡಲಾಗಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.