ADVERTISEMENT

ಯುಪಿಎಸ್‌ಸಿ ಪರೀಕ್ಷೆ: ಚಹರೆ ದೃಢೀಕರಣ ಕಡ್ಡಾಯ

ನಾಗರಿಕ ಸೇವಾ ಪರೀಕ್ಷೆ 939 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಪಿಟಿಐ
Published 5 ಫೆಬ್ರುವರಿ 2026, 16:25 IST
Last Updated 5 ಫೆಬ್ರುವರಿ 2026, 16:25 IST
.
.   

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ‘ಚಹರೆ ದೃಢೀಕರಣ’ವನ್ನು ಕಡ್ಡಾಯಗೊಳಿಸಲಾಗಿದೆ.

ಯುಪಿಎಸ್‌ಸಿ 2026 ನಾಗರಿಕ ಸೇವಾ ಪರೀಕ್ಷೆ 939 ಹುದ್ದೆಗಳ ನೇಮಕಾತಿಗೆ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ. ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆ ಮೇ 24ರಂದು ನಡೆಯಲಿದೆ. ಅರ್ಜಿ ಸಲ್ಲಿಸಲು ಫೆಬ್ರುವರಿ 24 ಕೊನೆಯ ದಿನ. 

ಎಲ್ಲ ಅಭ್ಯರ್ಥಿಗಳು ‘ಚಹರೆ ದೃಢೀಕರಣ’ ಪರೀಕ್ಷೆಗೆ ಒಳಪಡಬೇಕು. ಇದರಿಂದ ನಿಗದಿತ ಸಮಯದೊಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು ಹಾಗೂ ಗುರುತಿನ ಚೀಟಿಯಾಗಿ ಆಧಾರ್‌ ಕಾರ್ಡ್‌ ಬಳಸುವಂತೆಯೂ ಯುಪಿಎಸ್‌ಸಿ ಸಲಹೆ ನೀಡಿದೆ.

ADVERTISEMENT

ಪ್ರಿಲಿಮಿನರಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ದಾಖಲಿಸಲು ನಿಗದಿಪಡಿಸಿದ್ದ ಕಾಲಮಿತಿಯನ್ನು 7 ದಿನಗಳಿಂದ 5 ದಿನಗಳಿಗೆ ಯುಪಿಎಸ್‌ಸಿ ಕಡಿತಗೊಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.