
ಸಚಿವ ಪಿಯೂಷ್ ಗೋಯಲ್
ನವದೆಹಲಿ: ಅಮೆರಿಕ ವಿಧಿಸಿರುವ ಸುಂಕದ ವಿಷಯದಲ್ಲಿ ಸ್ಪಷ್ಟತೆ ಬಂದ ಬಳಿಕ ಭಾರತವು ತನ್ನ ವ್ಯಾಪಾರ ಮಾತುಕತೆಯನ್ನು ಪುನರಾರಂಭಿಸಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಇತ್ತೀಚೆಗೆ ಭಾರತ–ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ ನಡೆದಿತ್ತು. ಈ ಬಗ್ಗೆ ಚರ್ಚಿಸಲು ನಿಯೋಗವು ಫೆ.23ರಂದು ಅಮೆರಿಕಕ್ಕೆ ತೆರಳಬೇಕಿತ್ತು. ಆದರೆ ಕಾರಣಾಂತರಗಳಿಂದ ಮೂರು ದಿನಗಳ ಅಮೆರಿಕ ಪ್ರವಾಸವನ್ನು ಮುಂದೂಡಲಾಗಿದೆ ಎಂದು ಪಿಯೂಷ್ ತಿಳಿಸಿದ್ದಾರೆ.
ಆಳ–ಅಗಲ: ಮೊಬೈಲ್ ನಿಯಂತ್ರಣ ಸಾಧ್ಯವೇ?
ಚೀನಾ ದೇಶದ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ ಸರ್ಕಾರ ಯಾವ ಕ್ರಮಕೈಗೊಳ್ಳಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಿದ ಪಿಯೂಷ್, ನೆರೆಯ ದೇಶಗಳೊಂದಿಗೆ ಉತ್ತಮವಾದ ವ್ಯಾಪಾರ ಸಂಬಂಧಗಳನ್ನು ಹೊಂದುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುವುದು ಎಂದು ಪಿಯೂಷ್ ಹೇಳಿದ್ದಾರೆ.
ಚೀನಾದಿಂದ ಉತ್ತಮ ತಂತ್ರಜ್ಞಾನ, ಹೆಚ್ಚಿನ ಹೂಡಿಕೆಯನ್ನು ಹೇಗೆ ಆಕರ್ಷಿಸಬಹುದು ಎಂಬುದನ್ನು ಗಮನಹರಿಸಿದ್ದೇವೆ. ಈ ಬಗ್ಗೆ ಮುಕ್ತ ಮನಸ್ಸನ್ನು ಹೊಂದಿದ್ದೇವೆ ಹಾಗೂ ನಾವು ಮಾತುಕತೆಯಲ್ಲಿದ್ದೇವೆ ಎಂದು ಪಿಯೂಷ್ ತಿಳಿಸಿದ್ದಾರೆ.
ವಿದೇಶಿ ಹೂಡಿಕೆಗಳನ್ನು ಆರ್ಕಷಿಸಲು, ತಂತ್ರಜ್ಞಾನವನ್ನು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲು ಚೀನಾದೊಂದಿಗೆ ಹಂತ ಹಂತವಾಗಿ ಮಾತುಕತೆ ನಡೆಸುತ್ತಿದ್ದೇವೆ ಎಂದು ಪಿಯೂಷ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.