ADVERTISEMENT

ಉಕ್ರೇನ್–ರಷ್ಯಾ ಸಮರ: ಪರಿಸ್ಥಿತಿ ಕುರಿತು ಬ್ಲಿಂಕೆನ್–ಜೈಶಂಕರ್ ಚರ್ಚೆ

ಪಿಟಿಐ
Published 31 ಮಾರ್ಚ್ 2022, 4:09 IST
Last Updated 31 ಮಾರ್ಚ್ 2022, 4:09 IST
ಆ್ಯಂಟೊನಿ ಬ್ಲಿಂಕೆನ್‌
ಆ್ಯಂಟೊನಿ ಬ್ಲಿಂಕೆನ್‌   

ವಾಷಿಂಗ್ಟನ್:ಉ್ರಕೇನ್‌ನಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಗಳು ಮತ್ತು ಪ್ರಾದೇಶಿಕ ಆದ್ಯತೆಗಳ ಕುರಿತು ಯುಎಸ್‌ ರಾಜ್ಯ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಬುಧವಾರ ಮಾತನಾಡಿದ್ದಾರೆ. ಈ ಬಗ್ಗೆ ಯುಎಸ್‌ ರಾಜ್ಯ ಸಚಿವಾಲಯದ ವಕ್ತಾರ ನೆಡ್‌ ಪ್ರೈಸ್ ಮಾಹಿತಿ ನೀಡಿದ್ದಾರೆ.

'ಉಕ್ರೇನ್‌ನಲ್ಲಿ ಮಾನವೀಯ ಪರಿಸ್ಥಿತಿ ಹಾಗೂ ಮುಕ್ತ, ಸುರಕ್ಷಿತ, ಸಮೃದ್ಧ ಇಂಡೊ–ಪೆಸಿಫಿಕ್‌ಗೆ ಉತ್ತೇಜನ ಸೇರಿದಂತೆ ಪ್ರಾದೇಶಿಕ ಆದ್ಯತೆಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ' ಎಂದು ತಿಳಿಸಿದ್ದಾರೆ.

ಬ್ಲಿಂಕನ್‌ ಅವರು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಮೂರು ರಾಷ್ಟ್ರಗಳ ಭೇಟಿಯನ್ನು ಬುಧವಾರ ಪೂರ್ಣಗೊಳಿಸಿದ್ದಾರೆ. ಈ ವೇಳೆ ಅವರು,ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣದ ಪರಿಣಾಮಗಳನ್ನು ‌ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ದೇಶಗಳು ಅನುಭವಿಸಿವೆ ಎಂದು ಹೇಳಿದ್ದಾರೆ. ಹಾಗೆಯೇ, ರಷ್ಯಾದೊಂದಿಗಿನ ಬಾಂಧವ್ಯವನ್ನು ಮಿತಿಗೊಳಿಸಬೇಕು ಎಂದು ಅಲ್ಜೀರಿಯಾಗೆ ಮನವಿ ಮಾಡಿದ್ದಾರೆ.

ಜೈಶಂಕರ್‌ ಅವರೊಂದಿಗೆ ಕಳೆದ ತಿಂಗಳು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಬ್ಲಿಂಕೆನ್, ರಷ್ಯಾದ ಆಕ್ರಮಣವನ್ನು ಬಲವಾಗಿ ಖಂಡಿಸಿಸಾಮೂಹಿಕ ಪ್ರತಿಕ್ರಿಯೆ ನೀಡಬೇಕಿದೆ ಎಂದು ಒತ್ತಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.