ADVERTISEMENT

Ahmedabad Plane Crash: ತನಿಖೆಗೆ ಅಮೆರಿಕ, ಬ್ರಿಟನ್‌ ತಂಡ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:45 IST
Last Updated 16 ಜೂನ್ 2025, 15:45 IST
.
.   

ಅಹಮದಾಬಾದ್‌: ‘ಏರ್‌ ಇಂಡಿಯಾ’ (ಎಐ–171) ಅಪಘಾತಕ್ಕೆ ಕಾರಣ ಏನಾಗಿರಬಹುದು ಎಂಬುದನ್ನು ತಿಳಿದುಕೊಳ್ಳಲು ಅಮೆರಿಕದ ಎಂಟು ಮತ್ತು ಬ್ರಿಟನ್‌ನ ಐವರು ಸದಸ್ಯರ ತನಿಖಾ ತಂಡವು ಭಾನುವಾರ ಅಹಮದಾಬಾದ್‌ಗೆ ಬಂದಿದೆ.

ಇವರೇ ಅಲ್ಲದೆ ತನಿಖೆ ನಡೆಸಲು ಬೋಯಿಂಗ್‌ನ ತಜ್ಞರ ತಂಡವೂ ಸೋಮವಾರ ಬಂದಿಳಿದಿದೆ ಎಂದು ಮೂಲಗಳು ತಿಳಿಸಿವೆ. 

ಬೋಯಿಂಗ್‌ 787–8 ಡ್ರೀಮ್‌ಲೈನರ್‌ ವಿಮಾನವು ಜೂನ್‌ 12ರಂದು ಟೇಕಾಫ್‌ ಆದ ಕೆಲ ಕ್ಷಣಗಳಲ್ಲಿಯೇ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ ಕಟ್ಟಡಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಜನರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 30 ಮಂದಿ ಮೃತಪಟ್ಟಿದ್ದರು.  

ADVERTISEMENT

‘ಅಮೆರಿಕದ ಎಂಟು, ಬ್ರಿಟನ್‌ನ ಐವರು ತನಿಖಾ ತಂಡದಲ್ಲಿ ಇರಲಿದ್ದಾರೆ. ಅವರಿಗೆ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೊದ ಹಿರಿಯ ಅಧಿಕಾರಿಗಳು ನೆರವು ನೀಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.