
‘ಭಾರತ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿದರು.
ಲಖನೌ: ಉತ್ತರಪ್ರದೇಶದ ಅಲಿಘರ್‌ನ ಜಮಾಲ್‌ಪುರದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಾಗುತ್ತಿರುವ ‘ಭಾರತ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಇಂದು (ಭಾನುವಾರ) ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾಗವಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘ದೇಶದಲ್ಲಿ ಕಳೆದ 10 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ದೇಶದ ಪ್ರಮುಖ ನಗರಗಳಲ್ಲಿ ಜಿ–20 ಶೃಂಗಸಭೆಯಂತಹ ದೊಡ್ಡ ಕಾರ್ಯಕ್ರಮಗಳು ನಡೆದಿವೆ. ಇಂತಹ ಕಾರ್ಯಕ್ರಮಗಳಿಂದ ದೇಶದ ಗೌರವ ಹೆಚ್ಚುತ್ತಿದೆ ಎಂದು ಎಲ್ಲರೂ ಹೇಳಿದ್ದರು. ನಾವು ಸಹ ಅದನ್ನು ಒಪ್ಪುತ್ತೇವೆ. ಆದರೆ, ದೇಶದ ಯುವಕರಿಗೆ ಉದ್ಯೋಗವಿಲ್ಲ, ರೈತರು ಇನ್ನೂ ರಸ್ತೆಗಳಲ್ಲಿ ಕುಳಿತು ಪ್ರತಿಭಟಿಸುತ್ತಿದ್ದಾರೆ. ಹಣದುಬ್ಬರವು ದೇಶದ ಜನರಿಗೆ ಹೊರೆಯಾಗಿದೆ’ ಈ ವಿಚಾರಗಳ ಬಗ್ಗೆ ಬಿಜೆಪಿಗರು ಮೌನವಹಿಸಿದ್ದಾರೆ’ ಎಂದು ಟೀಕಿಸಿದ್ದಾರೆ.
‘ದೇಶದಲ್ಲಿ ಶೇ 90ರಷ್ಟಿರುವ (ಅಲ್ಪಸಂಖ್ಯಾತರು, ಒಬಿಸಿ, ಆದಿವಾಸಿಗಳು, ದಲಿತರು) ಕೇಂದ್ರ ಬಜೆಟ್‌ನಲ್ಲಿ ಶೇ 7ರಷ್ಟು ಪಾತ್ರವನ್ನು ಹೊಂದಿದ್ದಾರೆ. 62 ಅಧಿಕಾರಿಗಳು ಉತ್ತರ ಪ್ರದೇಶದ ಬಜೆಟ್ ಅನ್ನು ನಿಯಂತ್ರಿಸುತ್ತಾರೆ. ಈ 62 ಅಧಿಕಾರಿಗಳಲ್ಲಿ ಶೇ 4ರಷ್ಟು ಒಬಿಸಿಯಾವರಿದ್ದಾರೆ. ದಲಿತರ ಪಾಲು ಶೇ 6ರಷ್ಟಿದೆ’ ಎಂದು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಇದೇ ವೇಳೆ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಪಕ್ಷದ ಕಾರ್ಯಕರ್ತರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.