ADVERTISEMENT

ಉ.ಪ್ರ | ಡಿ.ಜೆ ಸಂಬಂಧ ವಾಗ್ವಾದ: ದೇವಸ್ಥಾನದ ಪೂಜಾರಿಯ ಥಳಿಸಿ ಕೊಲೆ

ಪಿಟಿಐ
Published 1 ಮೇ 2024, 5:05 IST
Last Updated 1 ಮೇ 2024, 5:05 IST
   

ದೇವರಿಯಾ (ಉ.ಪ್ರ): ಡಿ.ಜೆ ಹಾಕುವ ಸಂಬಂಧ ಕೆಲವು ಗ್ರಾಮಸ್ಥರು ಹಾಗೂ ದೇಗುಲದ ಪೂಜಾರಿ ನಡೆದ ವಾಗ್ವಾದ ತಾರಕಕ್ಕೇರಿ, ಪೂಜಾರಿಯನ್ನು ಕೋಲುಗಳಿಂದ ಥಳಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆನುಬಾ ಚೌಬೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಡಿ.ಜೆ ಹಾಕುವ ಸಂಬಂಧ ಅಶೋಕ್‌ ಚೌಬೆ (60) ಅವರನ್ನು ಕೆಲವರು ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ತಿಳಿಸಿದ್ದಾರೆ.

ADVERTISEMENT

ಘಟನೆ ನಡೆದ ಕೂಡಲೇ ಚೌಬೆ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಹೌಸ್ಲಾ ಪಸ್ವಾನ್‌ ಎಂಬುವರನ್ನು ಸೇರಿ ಒಟ್ಟು ಮೂವರನ್ನು ಬಂಧಿಸಲಾಗಿದೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

ಸದ್ಯ ಗ್ರಾಮದಲ್ಲಿ ಹಾಗೂ ದೇವಸ್ಥಾನದಲ್ಲಿ ಸಂಭವಿಸಬಹುದಾದ ಅನಗತ್ಯ ಘಟನೆಗಳನ್ನು ತಪ್ಪಿಸಲು ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ. ವಿಸ್ತೃ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.