ADVERTISEMENT

ಉತ್ತರಾಖಂಡ ಮೇಘಸ್ಫೋಟ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, 14 ಮಂದಿ ನಾಪತ್ತೆ

ನದಿಗಳಲ್ಲಿ 3 ಮೃತದೇಹ ಪತ್ತೆ

ಪಿಟಿಐ
Published 17 ಸೆಪ್ಟೆಂಬರ್ 2025, 13:39 IST
Last Updated 17 ಸೆಪ್ಟೆಂಬರ್ 2025, 13:39 IST
<div class="paragraphs"><p>ಪ್ರವಾಹ ಸಂತ್ರಸ್ತರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು</p></div>

ಪ್ರವಾಹ ಸಂತ್ರಸ್ತರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು

   

–ಪಿಟಿಐ ಚಿತ್ರ

ಲಖನೌ: ಉತ್ತರಾಖಂಡಲ್ಲಿ ಸಂಭವಿಸಿದ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ ಬುಧವಾರ 21ಕ್ಕೆ ಏರಿಕೆಯಾಗಿದೆ. 14 ಮಂದಿ ನಾಪತ್ತೆಯಾಗಿದ್ದಾರೆ.

ರಾಯಪುರದ ಸಂಗ್‌ ನದಿಯಲ್ಲಿ ಎರಡು ಮೃತದೇಹ ಮತ್ತು ಅಸನ್ ನದಿಯಲ್ಲಿ ಒಂದು ಮೃತದೇಹ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಸಹಸ್ತ್ರಧಾರ ಬಳಿಯ ಫುಲೆಟ್‌ ಗ್ರಾಮದಲ್ಲಿ ಆರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಪ್ರವಾಹ ಪೀಡಿತ ಗ್ರಾಮಗಳಾದ ಮಜಡಾ, ಚಹಮ್‌ಸರಿ ಮತ್ತು ಜಮಡಾದಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 

ಹಲವಾರು ಕಡೆ ಭೂಕುಸಿತ ಸಂಭವಿಸಿ, ರಸ್ತೆಗಳಿಗೆ ಅಪಾರ ಹಾನಿಯಾಗಿರುವುದರಿಂದ ಡೆಹ್ರಾಡೂನ್‌ನಿಂದ ಪ್ರಸಿದ್ಧ ಪ್ರವಾಸಿತಾಣಗಳಾದ ಮುಸ್ಸೋರಿ ಮತ್ತು ಸಹಸ್ತ್ರಧಾರಕ್ಕೆ ಬುಧವಾರವೂ ವಾಹನ ಸಂಚಾರ ಸ್ಥಗಿತಗೊಂಡಿದೆ. 

ಬದರೀನಾಥ ಹೆದ್ದಾರಿಯಲ್ಲಿ ವಾಹನವೊಂದು ಮಗುಚಿಬಿದ್ದ ಪರಿಣಾಮ ಏಳು ಮಂದಿಗೆ ಗಾಯಗಳಾಗಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ.

ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಮಳೆಯಿಂದಾಗಿ ಡೆಹ್ರಾಡೂನ್‌ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಭಾರಿ ಹಾನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.