ADVERTISEMENT

ಉತ್ತರಾಖಂಡ: ಸುರಂಗದಲ್ಲಿ ಸಿಲುಕಿದ್ದ 19 ಕಾರ್ಮಿಕರ ಪೈಕಿ 8 ಮಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 14:41 IST
Last Updated 31 ಆಗಸ್ಟ್ 2025, 14:41 IST
   

ಪಿತೋರಾಗಢ: ತೀವ್ರ ಮಳೆಯ ಕಾರಣ ಉಂಟಾದ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ರಾಷ್ಟ್ರೀಯ ಜಲವಿದ್ಯುತ್‌ ಶಕ್ತಿ ನಿಗಮ ಲಿಮಿಟೆಡ್‌ನ (ಎನ್‌ಎಚ್‌ಪಿಸಿ) 19 ಕಾರ್ಮಿಕರು ಉತ್ತರಾಖಂಡದ ಘರಚೂಲಾ ಜಿಲ್ಲೆಯಲ್ಲಿರುವ ದೌಲಿಗಂಗಾ ವಿದ್ಯುತ್‌ ಯೋಜನೆಯ ಸುರಂಗದಲ್ಲಿ ಭಾನುವಾರ ಸಿಲುಕಿಕೊಂಡಿದ್ದರು.

ರಕ್ಷಣಾ ಕಾರ್ಯ ನಡೆಸಿ, 8 ಕಾರ್ಮಿಕರನ್ನು ಸುರಂಗದಿಂದ ಹೊರಗೆ ತರಲಾಗಿದೆ. ಉಳಿದ 11 ಮಂದಿ ಇನ್ನೂ ಸುರಂಗದಲ್ಲಿಯೇ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿಸಲಾಗಿದೆ.

‘ಭೂಕುಸಿತದ ಕಾರಣ ಸುರಂಗದ ಎರಡೂ ಬದಿಗಳಲ್ಲಿ ದೊಡ್ಡ ಬಂಡೆಗಳು ಬಿದ್ದಿವೆ. ಅವುಗಳನ್ನು ತೆರವುಗೊಳಿಸಲು ಜೆಸಿಬಿಗಳನ್ನು ತರಲಾಗಿದೆ. ಕಾರ್ಮಿಕರು ಸುರಂಗದ ಒಳಗೆ ಸುರಕ್ಷಿತವಾಗಿದ್ದಾರೆ. ಸುರಂಗದಲ್ಲಿ ಸಾಕಷ್ಟು ಆಹಾರ ದಾಸ್ತಾನು ಇದೆ. ಆದ್ದರಿಂದ ಭಯಪಡುವ ಅವ್ಯಕತೆ ಇಲ್ಲ’ ಎಂದು ಜಿಲ್ಲಾಧಿಕಾರಿ ಜಿತೇಂದ್ರ ವರ್ಮಾ ತಿಳಿಸಿದರು.

ADVERTISEMENT

‘ಭೂಕುಸಿತದಿಂದ ಅವಶೇಷಗಳು ನಿರಂತರವಾಗಿ ಬೀಳುತ್ತಿವೆ. ಇದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ವಿದ್ಯುತ್‌ ಉತ್ಪಾದನೆಗೆ ಯಾವುದೇ ತೊಡಕಾಗಿಲ್ಲ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.