ADVERTISEMENT

ಅಂಕಿತಾ ಭಂಡಾರಿ ಕೊಲೆ ಕೇಸ್: ಬಿಜೆಪಿ ನಾಯಕನ ಮಗ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

Ankita Bhandari murder case: ಪೌರಿ ಗರ್‌ವಾಲ್ ಜಿಲ್ಲೆಯಲ್ಲಿರುವ ವನತಾರಾ ರೆಸಾರ್ಟ್‌ನಲ್ಲಿ 19 ವರ್ಷದ ಅಂಕಿತಾ ಭಂಡಾರಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು.

ಪಿಟಿಐ
Published 30 ಮೇ 2025, 10:37 IST
Last Updated 30 ಮೇ 2025, 10:37 IST
<div class="paragraphs"><p>ಅಂಕಿತಾ ಭಂಡಾರಿ</p></div>

ಅಂಕಿತಾ ಭಂಡಾರಿ

   

ಡೆಹರಾಡೂನ್: ಉತ್ತರಾಖಂಡದ ರೆಸಾರ್ಟ್‌ ಒಂದರಲ್ಲಿ ಸ್ವಾಗತಕಾರಿಣಿಯಾಗಿದ್ದ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉತ್ತರಾಖಂಡದ ಪೌರಿ ಜಿಲ್ಲಾ ನ್ಯಾಯಾಲಯ ಇಂದು ಆದೇಶ ನೀಡಿದೆ.

ಪೌರಿ ಗರ್‌ವಾಲ್ ಜಿಲ್ಲೆಯಲ್ಲಿರುವ ವನತಾರಾ ರೆಸಾರ್ಟ್‌ನಲ್ಲಿ 19 ವರ್ಷದ ಅಂಕಿತಾ ಭಂಡಾರಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು. 2022ರ ಸೆಪ್ಟೆಂಬರ್ 18 ರಂದು ರೆಸಾರ್ಟ್ ಬಳಿಯ ಕಾಲುವೆಯೊಂದರಲ್ಲಿ ಅಂಕಿತಾ ಮೃತದೇಹ ‍ಪೊಲೀಸರಿಗೆ ಸಿಕ್ಕಿತ್ತು.

ADVERTISEMENT

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೌರಿ ಜಿಲ್ಲಾ ಪೊಲೀಸರು, ವನತಾರಾ ರೆಸಾರ್ಟ್ ಮಾಲೀಕ ಪುಲಕೀತ್ ಆರ್ಯ, ಸಿಬ್ಬಂದಿ ಹಾಗೂ ಪುಲಕೀತ್ ಸಹಚರರಾದ ಸೌರಭ್ ಭಾಸ್ಕರ್ ಹಾಗೂ ಅಂಕಿತ್ ಗುಪ್ತಾ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವೈಮನಸ್ಸಿನಿಂದ ಅಂಕಿತಾಳನ್ನು ಕೊಲೆಗೈದಿದ್ದರು ಎಂದು ಆರೋಪಿಸಲಾಗಿತ್ತು.

ಮೂವರ ವಿರುದ್ಧ ಆರೋಪ ಸಾಬೀತಾಗಿದ್ದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶೆ ರೀನಾ ನೇಗಿ ಆದೇಶಿಸಿದ್ದಾರೆ. ಅಂಕಿತಾ ಪರ ವಕೀಲ ಅಜಯ್ ಪಂತ್ ವಾದಿಸಿದ್ದರು.

ಪುಲಕೀತ್ ಆರ್ಯ ಉತ್ತರಾಖಂಡದ ಬಿಜೆಪಿ ನಾಯಕನಾಗಿದ್ದ ವಿನೋದ್ ಆರ್ಯ ಅವರ ಮಗನಾಗಿದ್ದಾನೆ. ಅಂಕಿತಾ ಕೊಲೆ ನಂತರ ವಿನೋದ್ ಆರ್ಯ ಅವರನ್ನು ಬಿಜೆಪಿಯಿಂದ ಹೊರಹಾಕಲಾಗಿತ್ತು.

ಅಂಕಿತಾ ಭಂಡಾರಿ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ರಾಹುಲ್ ಗಾಂಧಿ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.