ADVERTISEMENT

ಕುನಾಲ್ ಕಾಮ್ರಾ ವಿರುದ್ಧದ ಪೊಲೀಸ್ ಕ್ರಮಕ್ಕೆ ಸಚಿವ ವೈಷ್ಣವ್ ಸಮರ್ಥನೆ

ಪಿಟಿಐ
Published 27 ಮಾರ್ಚ್ 2025, 15:24 IST
Last Updated 27 ಮಾರ್ಚ್ 2025, 15:24 IST
ಅಶ್ವಿನಿ ವೈಷ್ಣವ್ –ಪಿಟಿಐ ಚಿತ್ರ
ಅಶ್ವಿನಿ ವೈಷ್ಣವ್ –ಪಿಟಿಐ ಚಿತ್ರ   

ನವದೆಹಲಿ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉದ್ದೇಶಿಸಿ ಕೆಲವು ಮಾತುಗಳನ್ನು ಆಡಿದ್ದಕ್ಕೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿರುವುದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಸಮರ್ಥಿಸಿಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೈಷ್ಣವ್, ‘ಕಾನೂನಿನ ಅಡಿಯಲ್ಲಿ ಸಮನ್ಸ್ ಜಾರಿ ಮಾಡಬೇಕು ಎಂದಾದರೆ ಆ ಕೆಲಸ ಆಗಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು. ಕಾಮ್ರಾ ಅವರನ್ನು ಗುರಿಯಾಗಿಸಿ ಪೊಲೀಸರು ತೀರಾ ಅತಿರೇಕದ ಕ್ರಮ ಕೈಗೊಂಡಿದ್ದಾರೆಯೇ ಎಂದು ವೈಷ್ಣವ್ ಅವರನ್ನು ‍ಪ್ರಶ್ನಿಸಲಾಗಿತ್ತು.

‘ನಾವು ಸಮಾಜವಾಗಿ, ಸಂವಿಧಾನದ ಚೌಕಟ್ಟಿನ ಒಳಗೆ ಕೆಲಸ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಸ್ಪಷ್ಟವಾದ ವಿವರಣೆ ಇದೆ. ಅದನ್ನು ಎಲ್ಲರೂ ಗೌರವಿಸುತ್ತಾರೆ. ಸಂವಿಧಾನವು ಕೆಲವು ನಿರ್ಬಂಧಗಳನ್ನು ವಿಧಿಸಿದೆ, ಅವು ಹಕ್ಕುಗಳಷ್ಟೇ ಮುಖ್ಯವಾಗಿವೆ’ ಎಂದು ವೈಷ್ಣವ್ ವಿವರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.