ADVERTISEMENT

ಇಂಡೊ–ರಷ್ಯನ್ ವಿನ್ಯಾಸ: ವಂದೇ ಭಾರತ್ ವಿಲಾಸಿ ಸ್ಲೀಪರ್‌ ಕೋಚ್‌ನ ಹೊಸರೂಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2025, 10:09 IST
Last Updated 16 ಅಕ್ಟೋಬರ್ 2025, 10:09 IST
<div class="paragraphs"><p>ವಂದೇ ಭಾರತ್</p></div>

ವಂದೇ ಭಾರತ್

   

ಕೈನೆಟ್ ರೈಲ್ವೆ ಸೊಲೂಷನ್ಸ್‌ ಚಿತ್ರ

ಬೆಂಗಳೂರು: ವಂದೇಭಾರತ್‌ ಸ್ಲೀಪರ್‌ ಬೋಗಿಯ ಪ್ರಥಮ ದರ್ಜೆ ಕೋಚ್‌ನ ವಿನ್ಯಾಸವನ್ನು ಇಂಡೋ–ರಷ್ಯಾ ಜಂಟಿಯಾಗಿ ನಿರ್ವಹಿಸುತ್ತಿದ್ದು, ಇದು ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ರೈಲ್ವೆ ಉಪಕರಣ ಪ್ರದರ್ಶನದಲ್ಲಿ (IREE) ಗಮನ ಸೆಳೆದಿದೆ.

ADVERTISEMENT

ರಷ್ಯನ್ ರೋಲಿಂಗ್ ಸ್ಟಾಕ್ ಕಂಪನಿ ಟಿಎಂಎಚ್‌ ಹಾಗೂ ರೈಲ್‌ ವಿಕಾಸ್ ನಿಗಮ ಲಿಮಿಟೆಡ್‌ (RVNL) ಜಂಟಿಯಾಗಿ ಕೈನೆಟ್‌ ರೈಲ್ವೆ ಸೊಲೂಷನ್ಸ್‌ ಮೂಲಕ ಹೊಸ ಬಗೆಯ ವಿನ್ಯಾಸವನ್ನು ಸಿದ್ಧಪಡಿಸಿದೆ. ಈ ಕಂಪನಿಯು ಸದ್ಯ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 120 ವಂದೇಭಾರತ್ ಸ್ಲೀಪರ್‌ ರೈಲುಗಳ 1,920 ಕೋಚುಗಳ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆ ಹೊತ್ತಿದೆ.

ಆಧುನಿಕ ವಿನ್ಯಾಸ, ಹೆಚ್ಚು ಸ್ಥಳಾವಕಾಶ

ಪ್ರಯಾಣಿಕರ ಆರಾಮದಾಯಕ ಪ್ರಯಾಣ ಮತ್ತು ಖಾಸಗಿತನ ಕಾಪಾಡಲು ಆದ್ಯತೆ ನೀಡಿ ನಾಲ್ವರು ಪ್ರಯಾಣಿಕರು ಮಲಗಲು ಅನುಕೂಲವಾಗುವಂತ ಪ್ರಥಮ ದರ್ಜೆಯ ವಿನ್ಯಾಸವನ್ನು ಕೈನೆಟ್‌ ರೈಲ್ವೆ ಸೊಲೂಷನ್ಸ್‌ ವಿನ್ಯಾಸ ಮಾಡಿದೆ. ಮೇಲಿನ ಬರ್ತ್‌ಗೆ ಹೋಗಲು ಸುಲಭವಾದ ಮೆಟ್ಟಿಲು, ಪ್ರತಿ ಬರ್ತ್‌ಗೂ ಯುಎಸ್‌ಬಿ ಪೋರ್ಟ್‌, ಓದಲು ಪ್ರತ್ಯೇಕ ಬೆಳಕಿನ ವ್ಯವಸ್ಥೆ ಮತ್ತು ಸಾಮಾನು, ಸರಂಜಾಮು ಇಡಲು ವಿಭಿನ್ನ ಮಾದರಿಯ ವಿನ್ಯಾಸ ಇದರದ್ದು.

ಇದರ ವಿನ್ಯಾಸಕ್ಕೆ ಆಧುನಿಕ ತಂತ್ರಜ್ಞಾನದ ಸಾಮಗ್ರಿಗಳನ್ನು ಬಳಸಲಾಗಿದೆ. ಆಕರ್ಷಕ ಹಾಗೂ ಹಿತಕರ ಅನುಭವ ನೀಡುವ ಲೋಹದ ಪಟ್ಟಿಗಳು, ವಿಲಾಸಿ ಎನಿಸುವ ಆಸನ, ಒಳಾಂಗಣ ವಿನ್ಯಾಸ ಎಲ್ಲವೂ ಭಿನ್ನವಾಗಿವೆ. ಭಾರತೀಯ ವಿನ್ಯಾಸ, ಕಲೆಯನ್ನು ಹಾಗೂ ಕಲಾವಿದರನ್ನೂ ಬಳಸಿಕೊಳ್ಳಲಾಗಿದೆ. 

ಮೆಟ್ಟಲುಗಳ ಕೆಳಗಿನ ಸ್ಥಳಾವಕಾಶವನ್ನು ಸುದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಪುಸ್ತಕ, ಫೋನ್‌ ಅಥವಾ ವಾಚ್‌ಗಳನ್ನಿಡಲು ಪುಟ್ಟ ಜಾಗವನ್ನು ನೀಡಲಾಗಿದೆ ಎಂದು ಕೈನೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಲಾಸಿ ಕೋಚ್‌ಗಳ ತಯಾರಿಕೆ

ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ರೈಲ್‌ ಕೋಚ್‌ ಕಾರ್ಖಾನೆಯು ಇದರ ಅಂತಿಮ ವಿನ್ಯಾಸವನ್ನು ಸಿದ್ಧಪಡಿಸಿದೆ. ಕೋಚ್‌ಗಳ ನಿರ್ಮಾಣ 2025ರ ಅಂತ್ಯದಲ್ಲಿ ಆರಂಭವಾಗಲಿದೆ. ಮೊದಲ ಕೋಚ್‌ನ ಲೋಕಾರ್ಪಣೆಯ ಮೂಲಕ ಇಡೀ ಯೋಜನೆಯತ್ತ ಎಲ್ಲರ ಗಮನ ನೆಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.