ADVERTISEMENT

ವಾರಾಣಸಿ | 19 ವರ್ಷದ ಯುವತಿ ಮೇಲೆ ಅತ್ಯಾಚಾರ; 6 ದಿನ; 23 ಜನ; 9 ಬಂಧನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 13:01 IST
Last Updated 9 ಏಪ್ರಿಲ್ 2025, 13:01 IST
<div class="paragraphs"><p>ಅತ್ಯಾಚಾರ</p></div>

ಅತ್ಯಾಚಾರ

   

ಸಾಂದರ್ಭಿಕ ಚಿತ್ರ

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ 19 ವರ್ಷದ ಯುವತಿಯನ್ನು ಅಪಹರಿಸಿದ 23 ಜನ ಸತತ ಆರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ADVERTISEMENT

‘ಯುವತಿಗೆ ಬಲವಂತವಾಗಿ ಮಾದಕದ್ರವ್ಯ ನೀಡಿ, ನಂತರ ಹಲವು ಹೋಟೆಲುಗಳಿಗೆ ಆಕೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈವರೆಗೂ ಒಂಬತ್ತು ಜನರನ್ನು ಬಂಧಿಸಲಾಗಿದ್ದು, ಉಳಿದವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು. ಸಂತ್ರಸ್ತ ಯುವತಿ ಆರೋಗ್ಯವಾಗಿದ್ದು, ಅವರ ಕುಟುಂಬದವರೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿದುಷಾ ಸಕ್ಸೇನಾ ತಿಳಿಸಿದ್ದಾರೆ. 

‘ಮಾರ್ಚ್‌ 29ರಂದು ಯುವತಿ ಕೆಲ ಯುವಕರೊಂದಿಗೆ ಹೊರಗೆ ಹೋಗಿದ್ದರು. ಏ. 4ರಂದು, ಯುವತಿ ಕುಟುಂಬದವರು ದೂರು ನೀಡಿ, ಕಾಣೆಯಾದ ಪ್ರಕರಣ ದಾಖಲಿಸಿದ್ದರು. ಯುವತಿಯನ್ನು ಪತ್ತೆ ಮಾಡಿದ ಪೊಲೀಸರಿಗೆ ಆರಂಭದಲ್ಲಿ ಅತ್ಯಾಚಾರ ನಡೆದ ಕುರಿತು ಯಾವುದೇ ಮಾಹಿತಿಯನ್ನು ಆಕೆ ನೀಡಿರಲಿಲ್ಲ. ಆದರೆ ಏ. 6ರಂದು ಕುಟುಂಬದವರು ನೀಡಿದ ದೂರಿನಲ್ಲಿ ಅತ್ಯಾಚಾರ ನಡೆದಿದೆ ಎಂದು ನಮೂದಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘12 ಜನರ ಹೆಸರಿನಲ್ಲಿ, 11 ಅನಾಮದೇಯ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್‌ ವಿಶ್ವಕರ್ಮ, ಸಮೀರ್ ಆಯುಷ್‌, ಸೊಹೈಲ್‌, ಡ್ಯಾನಿಶ್, ಅನ್ಮೋಲ್, ಸಾಜಿತ್, ಜಾಹೀರ್, ಇಮ್ರಾನ್, ಜೈಬ್‌, ಅಮಾನ್ ಮತ್ತು ರಾಜ್ ಖನ್ನಾ ಎಂಬ ಆರೋಪಿಗಳನ್ನು ಗುರುತಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ತಾಯಿ ನೀಡಿದ ದೂರಿನಲ್ಲೇನಿದೆ..?

ಯುವತಿಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ‘ಮಾರ್ಚ್ 29ರಂದು ತಮ್ಮ ಮಗಳು ಆಕಯೆ ಸ್ನೇಹಿತೆಯ ಮನೆಗೆ ಹೋಗಿದ್ದಳು. ಅಲ್ಲಿಂದ ಮರಳುವಾಗ ರಾಜ್ ವಿಶ್ವಕರ್ಮ ಅವರನ್ನು ಭೇಟಿಯಾಗಿದ್ದಳು. ಆಕೆಯನ್ನು ಕೆಫೆಗೆ ಕರೆದೊಯ್ದಿದ್ದರು. ಅಲ್ಲಿ ಸೇರಿದ ರಾಜ್‌ ಸ್ನೇಹಿತರು, ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದಿದ್ದಾರೆ.

‘ಮರುದಿನ ಆಕೆ ಸಮೀರ್ ಎಂಬಾತನನ್ನು ಭೇಟಿಯಾಗಿದ್ದಾಳೆ. ಆತ ಮತ್ತು ಅವರ ಸ್ನೇಹಿತ ಮಗಳನ್ನು ಹೆದ್ದಾರಿ ಕಡೆ ಕರೆದೊಯ್ದು ಅವಳೊಂದಿಗೆ ಅನುಚಿತವಾಗಿ ವರ್ತಿಸಿ, ನದೇಸರ್‌ ಬಳಿ ಬಿಟ್ಟು ಹೋಗಿದ್ದಾರೆ. ಮಾರ್ಚ್ 31ರಂದು ಆಯುಷ್‌ ಮತ್ತು ಇತರ ಐವರು ಸಿಗಾರ್‌ನಲ್ಲಿರುವ ಕಾಂಟಿನೆಂಟಲ್ ಕೆಫೆಗೆ ಕರೆದೊಯ್ದು, ಮಾದಕ ದ್ರವ್ಯ ಬೆರೆಸಿದ ಪಾನೀಯ ನೀಡಿ, ಅತ್ಯಾಚಾರ ನಡೆಸಿದ್ದಾರೆ. ಏ. 1ರಂದು ಸಾಜಿದ್ ಎಂಬಾತ ತನ್ನ ಇತರ ಮೂವರು ಸ್ನೇಹಿತರೊಂದಿಗೆ ಸೇರಿ ಮಗಳನ್ನು ಹೋಟೆಲಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಏ. 2ರಂದು ರಾಜ್ ಖಾನ್‌ ಎಂಬಾತ ಈಕೆಯನ್ನು ಆತನ ಮನೆಯ ಮೇಲ್ಛಾವಣಿಗೆ ಕರೆದೊಯ್ದು, ಮತ್ತೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಆಗ ಯುವತಿ ಕಿರುಚಿದ್ದರಿಂದ, ಆಕೆಯನ್ನು ಅಸ್ಸಿ ಘಾಟ್‌ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಏ. 3ರಂದು ಡ್ಯಾನಿಷ್ ಎಂಬಾತ ತನ್ನ ಇತರ ಸ್ನೇಹಿತರೊಂದಿಗೆ ಮರಳಿ ಹೋಟೆಲಿಗೆ ಕರೆದೊಯ್ದು ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.