ADVERTISEMENT

IAS ಅಧಿಕಾರಿಯ ಮಗಳನ್ನು ಅಪಹರಿಸಲು ಹೋಗಿ ಜೈಲು ಸೇರಿದ್ದ ವ್ಯಕ್ತಿ ಈಗ ಹರಿಯಾಣ AAG!

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 13:42 IST
Last Updated 23 ಜುಲೈ 2025, 13:42 IST
<div class="paragraphs"><p>ಕೃಪೆ:&nbsp;<a href="https://x.com/nitesh1572">@nitesh1572</a></p></div>
   

ಕೃಪೆ: @nitesh1572

ಚಂಡೀಗಢ: ಐಎಎಸ್‌ ಅಧಿಕಾರಿಯೊಬ್ಬರ ಮಗಳನ್ನು ಹಿಂಬಾಲಿಸಿ, ಆಕೆಯ ಅಪಹರಣಕ್ಕೆ ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಲವು ತಿಂಗಳು ಜೈಲುವಾಸ ಅನುಭವಿಸಿದ್ದ ವಿಕಾಸ್‌ ಬರಾಲಾ ಅವರೀಗ ಹರಿಯಾಣದ ಸಹಾಯಕ ಅಡ್ವೊಕೇಟ್‌ ಜನರಲ್‌ (ಎಎಜಿ) ಆಗಿ ನೇಮಕಗೊಂಡಿದ್ದಾರೆ.

ವಿಕಾಸ್‌ ಅವರು ಬಿಜೆಪಿ ಸಂಸದ ಸುಭಾಷ್‌ ಬರಾಲಾ ಅವರ ಮಗ. ಅಧಿಕಾರಿಗಳು ಈ ಬಗ್ಗೆ ಬುಧವಾರ ಮಾಹಿತಿ ನೀಡಿದರು. ವಿಕಾಸ್‌ ಅವರು ದೆಹಲಿಯ ನ್ಯಾಯಾಲಯಗಳಲ್ಲಿ ಈಗ ಹರಿಯಾಣ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. ಕಾನೂನು ಇಲಾಖೆಗಾಗಿ ಹರಿಯಾಣ ಸರ್ಕಾರವು ಜುಲೈ 18ರಂದು 100 ನೇಮಕಾತಿಗಳನ್ನು ಮಾಡಿತ್ತು. ಇದರಲ್ಲಿ ವಿಕಾಸ್‌ ಅವರದ್ದೂ ಒಂದು.

ADVERTISEMENT

ಸುಭಾಷ್‌ ಅವರು ಹರಿಯಾಣದ ಬಿಜೆ‍ಪಿ ಅಧ್ಯಕ್ಷರಾಗಿದ್ದಾಗ 2017ರಲ್ಲಿ ಈ ಘಟನೆ ನಡೆದಿತ್ತು. ಐಎಎಸ್‌ ಅಧಿಕಾರಿಯ ಮಗಳು ಪೊಲೀಸರಿಗೆ ದೂರು ನೀಡಿದ್ದರು. ಚಂಡೀಗಢ ನ್ಯಾಯಾಲಯದಲ್ಲಿ ಈಗಲೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಜಾಮೀನಿನ ಮೇಲೆ ವಿಕಾಸ್‌ ಅವರು ಹೊರಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.