ADVERTISEMENT

ಎಸ್‍ಪಿ-ಬಿಎಸ್‌ಪಿಗೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ:ವರುಣ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 6 ಮೇ 2019, 12:29 IST
Last Updated 6 ಮೇ 2019, 12:29 IST
   

ನವದೆಹಲಿ: ಸಮಾಜವಾದಿ ಪಕ್ಷ -ಬಿಎಸ್‌ಪಿ ಮೈತ್ರಿಕೂಟಕ್ಕೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆಎಂದು ಬಿಜೆಪಿ ನಾಯಕ, ಪಿಲಿಭಿತ್ಚುನಾವಣಾ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಹೇಳಿದ್ದಾರೆ.

ನೀವು ಭಾರತಮಾತೆಜತೆಗಿದ್ದೀರಾ? ಅಥವಾ ಪಾಕಿಸ್ತಾನದ ಜತೆಗಿದ್ದೀರಾ? ನೀವು ಆ ಮೈತ್ರಿಕೂಟಕ್ಕೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ ಎಂದಿದ್ದಾರೆ ವರುಣ್ ಗಾಂಧಿ.

ಅಮ್ಮ ಮೇನಕಾ ಗಾಂಧಿ ಅವರ ಚುನಾವಣಾ ಕ್ಷೇತ್ರ ಸುಲ್ತಾನ್‌ಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ವರುಣ್ ಗಾಂಧಿ ಈ ರೀತಿ ಹೇಳಿದ್ದಾರೆ.

ADVERTISEMENT

ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ವರುಣ್, ಈ ಬಾರಿ ನೀವು ಭಾರತ ಮಾತೆಗೆ ಮತ ನೀಡಬೇಕು. ನನ್ನ ಅಮ್ಮ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಅವರು ಒಳ್ಳೆಯ ವ್ಯಕ್ತಿ, ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು, ಆಕೆ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಕಳೆದ 35 ವರ್ಷಗಳಲ್ಲಿ ಅವಳ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯ ಕೇಳಿ ಬಂದಿಲ್ಲ.ಆದರೆ ನಾನು ಭಾರತಮಾತೆಯ ಪರವಾಗಿ ಮತಯಾಚನೆಗೆ ಬಂದಿದ್ದೇನೆಯೇ ಹೊರತು ಅಮ್ಮನ ಪರವಾಗಿ ಅಲ್ಲ,.ನೀವು ಭಾರತಮಾತೆಯ ಪರವಾಗಿ ಮತನೀಡಲು ಸಿದ್ಧರಿದ್ದೀರಾ? ಎಂದು ಕೇಳಿದಾಗ ಸಭಿಕರು, ನಾವು ಸಿದ್ಧ ಎಂದು ಕೂಗಿದ್ದಾರೆ.

ಆಮೇಲೆ ಎಸ್‌ಪಿ -ಬಿಎಸ್‌ಪಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ಮಾಡಿದ ವರುಣ್ ಅವರೆಲ್ಲರೂ ಪಾಕಿಸ್ತಾನಿಗಳು. ಅಲ್ಲವೇನೋ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.