ADVERTISEMENT

ಶುಲ್ಕ ಪಾವತಿಸದ ರೋಗಿ ಕೊಂದ ಆಸ್ಪತ್ರೆ ಸಿಬ್ಬಂದಿ–ಕುಟುಂಬದವರ ಆರೋಪ

ಪಿಟಿಐ
Published 3 ಜುಲೈ 2020, 16:26 IST
Last Updated 3 ಜುಲೈ 2020, 16:26 IST
ರೋಗಿ ಕೊಲೆ 
ರೋಗಿ ಕೊಲೆ    

ಆಲಿಗಡ: ಖಾಸಗಿ ಆಸ್ಪತ್ರೆಯೊಂದರ ಪ್ರವೇಶ ಶುಲ್ಕ ₹ 4 ಸಾವಿರ ಪಾವತಿಸದ ಕಾರಣಕ್ಕೆ ಸಿಬ್ಬಂದಿಯೇ ರೋಗಿಯನ್ನು ಹೊಡೆದು ಕೊಂದಿದ್ದಾರೆ ಎನ್ನಲಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಹೊಟ್ಟೆ ನೋವಿನಿಂದಾಗಿ ಕುವಾರ್ಸಿ ಪ್ರದೇಶದ ಧೋರಾ ಬೈಪಾಸ್‌ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಬಂದ 44 ವರ್ಷದ ಸುಲ್ತಾನ್‌ ಖಾನ್‌ಗೆ ಅಲ್ಟ್ರಾಸೌಂಡ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಲಾಗಿತ್ತು. ಇದಕ್ಕಾಗಿ ₹ 4,500 ವೆಚ್ಚ ಭರಿಸಲು ಅಶಕ್ತರಾದ್ದರಿಂದ ವಾಪಸ್‌ ಬರಲು ಇಚ್ಛಿಸಿದರು. ಈ ಮಧ್ಯೆ ಸುಲ್ತಾನ್‌ಗೆ ಆಸ್ಪತ್ರೆಯವರು ಕೆಲವು ಔಷಧಿಗಳನ್ನು ನೀಡಿದ್ದರು ಅದಕ್ಕಾಗಿ ಹಣ ಪಾವತಿ ಮಾಡಲಾಗಿತ್ತು ಎನ್ನಲಾಗಿದೆ.

ಕೂಡಲೇ ಸಿಬ್ಬಂದಿ ಆಸ್ಪತ್ರೆಯ ಪ್ರವೇಶ ಶುಲ್ಕ ₹ 4 ಸಾವಿರ ಪಾವತಿಸಬೇಕು ಎಂದು ತಾಕೀತು ಮಾಡಿದರು. ಅಲ್ಲದೇ ಸುಲ್ತಾನ್‌ ಮೇಲೆ ದಾಳಿ ನಡೆಸಿ, ಮರದ ಕೋಲಿನಿಂದ ತಲೆಗೆ ಹೊಡೆದರು. ಸ್ಥಳದಲ್ಲಿಯೇ ಸುಲ್ತಾನ್‌ ಮೃತಪಟ್ಟರು ಎಂದು ಸಂಬಂಧಿಕರಾದ ಚಮನ್ ಖಾನ್‌‌ ತಿಳಿಸಿದ್ದಾರೆ.

ADVERTISEMENT

ಮರಣೋತ್ತರ ಪರೀಕ್ಷೆಯ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಅಭಿಷೇಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.