ADVERTISEMENT

ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಡಿ ಎಂದಿದ್ದರು: ದಿಗ್ವಿಜಯ ಸಿಂಗ್‌

ಪಿಟಿಐ
Published 10 ಮಾರ್ಚ್ 2025, 16:07 IST
Last Updated 10 ಮಾರ್ಚ್ 2025, 16:07 IST
<div class="paragraphs"><p>ದಿಗ್ವಿಜಯ ಸಿಂಗ್‌</p></div>

ದಿಗ್ವಿಜಯ ಸಿಂಗ್‌

   

ಭೋಪಾಲ್‌: ‘ನಾನು ಮಧ್ಯ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರಚಾರ ನಡೆಸಲು ಗುಜರಾತ್‌ನಲ್ಲಿ ಹೋಗಿದ್ದೆ. ಈ ವೇಳೆ ‘ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಬೇಡಿ. ಯಾಕೆಂದರೆ ಹಿಂದೂಗಳು ಸಿಟ್ಟಾಗುತ್ತಾರೆ’ ಎಂದು ನನಗೆ ಹೇಳಲಾಗಿತ್ತು’ ಎಂದು ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್‌ ಸೋಮವಾರ ಹೇಳಿದರು.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ‘ಹೃದಯದಲ್ಲಿ ಕಾಂಗ್ರೆಸ್‌ ಸಿದ್ಧಾಂತ ಹೊಂದಿರುವವರು ಜನರೊಂದಿಗೆ ನಿಲ್ಲುತ್ತಾರೆ. ಯಾರು ಜನರಿಂದ ದೂರವಿರುತ್ತಾರೊ ಅವರಲ್ಲಿ ಅರ್ಧದಷ್ಟು ಜನರು ಬಿಜೆಪಿಯವರು’ ಎಂದಿದ್ದರು.

ADVERTISEMENT

ರಾಹುಲ್‌ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿ ದಿಗ್ವಿಜಯ ಸಿಂಗ್‌, ‘ಕಾಂಗ್ರೆಸ್‌ನಲ್ಲಿರುವ ಬಿಜೆಪಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ಅವರನ್ನು ಕಿತ್ತೊಗೆಯಬೇಕು’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.