ADVERTISEMENT

ಮಹಾ ಜನರ ಬೆನ್ನಿಗೆ ಚೂರಿ ಹಾಕಿದ  ಅಜಿತ್‌ ಪವಾರ್‌: ಸಂಜಯ್‌ ರಾವುತ್‌ 

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 5:19 IST
Last Updated 23 ನವೆಂಬರ್ 2019, 5:19 IST
   

ಮುಂಬೈ: ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)ದ ಮುಖಂಡ ಅಜಿತ್‌ ಪವಾರ್‌ ಮಹಾರಾಷ್ಟ್ರದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಶನಿವಾರ ಹೇಳಿದ್ದಾರೆ.

ಮಹಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಮೈತ್ರಿ ಸರ್ಕಾರ ರಚನೆಯಾಗಿದ್ದು ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್‌ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್‌ ಶನಿವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ನಿನ್ನೆ ನಡೆದ ಸಭೆಯಲ್ಲಿ ಅಜಿತ್‌ ಪವಾರ್‌ ಭಾಗವಹಿಸಿದ್ದರು ನಂತರ ವಕೀಲರ ಜೊತೆ ಮಾತನಾಡಬೇಕು ಎಂದು ಮಧ್ಯದಲ್ಲೆ ಹೋದರು, ಅವರ ನಡವಳಿಕೆಯೂ ವಿಚಿತ್ರವಾಗಿತ್ತು. ಅವರಿಗೆ ಫೋನ್‌ ಮಾಡಿದಾಗ ಸ್ವೀಚ್‌ ಆಫ್‌ ಬರುತ್ತಿತ್ತು. ನಮಗೆ ಈಗ ತಿಳಿಯಿತು ಅವರು ಯಾವ ವಕೀಲರನ್ನು ನೋಡಲು ಹೋಗಿದ್ದರು ಎಂದು. ಅಜಿತ್‌ ಪವಾರ್‌ ಮಹಾರಾಷ್ಟ್ರ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಸಂಜಯ್‌ ರಾವುತ್‌ ಕಿಡಿಕಾರಿದ್ದಾರೆ.

ADVERTISEMENT

ಬಿಜೆಪಿಗೆ ಬೆಂಬಲ ನೀಡಿರುವುದು ಅಜಿತ್‌ ಪವಾರ್‌ ಅವರ ವೈಯಕ್ತಿಕ ವಿಚಾರ, ಎನ್‌ಸಿಪಿ ಇದನ್ನು ಬೆಂಬಲಿಸುವುದಿಲ್ಲ ಎಂದು ಶರದ್‌ ಪವಾರ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರ ಐಟಿ, ಇಡಿಯನ್ನು ತೋರಿಸಿ ಅಜಿತ್‌ ಪವಾರ್‌ ಅವರನ್ನು ಬೆದರಿಸಿ ಎನ್‌ಸಿಪಿಯನ್ನು ಇಬ್ಬಾಗ ಮಾಡಿದೆ ಎಂದು ಶಿವಸೇನಾ ಬಿಜೆಪಿ ವಿರುದ್ಧ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.