ADVERTISEMENT

ನೋಡಿ: ಡೆಹ್ರಾಡೂನ್‌ನಲ್ಲಿ ಭಾರಿ ಮಳೆಗೆ ಕೊಚ್ಚಿ ಹೋದ ರಸ್ತೆ ನದಿಯಲ್ಲಿ ಲೀನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2021, 9:48 IST
Last Updated 27 ಆಗಸ್ಟ್ 2021, 9:48 IST
ಚಿತ್ರ ಕೃಪೆ: ಎಎನ್‌ಐ, ಸ್ಕ್ರೀನ್‌ಶಾಟ್
ಚಿತ್ರ ಕೃಪೆ: ಎಎನ್‌ಐ, ಸ್ಕ್ರೀನ್‌ಶಾಟ್   

ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಶುಕ್ರವಾರದಂದು ರಸ್ತೆಯೊಂದು ಕೊಚ್ಚಿಹೋಗಿ ನದಿಯಲ್ಲಿ ಲೀನವಾಗಿರುವ ಘಟನೆ ವರದಿಯಾಗಿದೆ.

ಕಳೆದ 48 ತಾಸಿನಿಂದ ಡೆಹ್ರಾಡೂನ್‌ನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಕಡೆ ಭಾರಿ ಅನಾಹುತ ಉಂಟಾಗಿದೆ.

ಮಾಲ್‌ದೇವತಾ-ಸಹಸ್ರಧಾರ ಸಂಪರ್ಕ ನದಿಯ ರಸ್ತೆಯು ನೀರಿನ ರಭಸಕ್ಕೆ ಹಲವು ಮೀಟರ್‌ಗಳಷ್ಟು ಕೊಚ್ಚಿ ಹೋಗಿದೆ.

ಡೆಹ್ರಾಡೂನ್ ಜಿಲ್ಲಾಡಳಿತದ ಪ್ರಕಾರ ಈ ಘಟನೆಯು ಖೇರಿ ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿದುಕೊಂಡಿದೆ.

ಪ್ರವಾಹದ ರಭಸದಲ್ಲಿ ಕೆಲವು ವಾಹನಗಳು ಕೊಚ್ಚಿ ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ.

ಡೆಹ್ರಾಡೂನ್‌ನಲ್ಲಿ ಸೋಮವಾರದಿಂದ ನಿರಂತರ ಮಳೆಯಾಗುತ್ತಿದ್ದು, ಹಲವು ಕಡೆ ಜಲಾವೃತವಾಗಿದೆ. ನದಿಗಳು ಉಕ್ಕಿ ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.