ADVERTISEMENT

ಭಾರತೀಯರೆಲ್ಲರ ಡಿಎನ್‌ಎ ಒಂದೇ ಎಂದ ಮೋಹನ್‌ ಭಾಗವತ್‌ ಹೇಳಿಕೆಗೆ ಸಾಧ್ವಿ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2021, 2:45 IST
Last Updated 11 ಜುಲೈ 2021, 2:45 IST
ಸಾಧ್ವಿ ಪ್ರಾಚಿ
ಸಾಧ್ವಿ ಪ್ರಾಚಿ   

ಜೈಪುರ: ಧರ್ಮವನ್ನು ಹೊರತು ಪಡಿಸಿ ಭಾರತೀಯರೆಲ್ಲರ ಡಿಎನ್‌ಎಗಳು ಒಂದೇ. ಆಚರಣೆಯ ಆಧಾರದಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಸದಸ್ಯೆ ಸಾಧ್ವಿ ಪ್ರಾಚಿ, ಗೋಮಾಂಸ ತಿನ್ನುವವರಡಿಎನ್‌ಎ ಹಿಂದೂಗಳಲ್ಲಿ ಎಂದಿಗೂ ಕಂಡುಬರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ರಾಜಸ್ಥಾನದ ದೌಸಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾಧ್ವಿ, 'ಬಹುಶಃಎಲ್ಲಭಾರತೀಯರುಒಂದೇ ಡಿಎನ್‌ಎ ಹಂಚಿಕೊಂಡಿರಬಹುದು. ಆದರೆ, ಗೋಮಾಂಸ ತಿನ್ನುವವರ ಡಿಎನ್‌ಎ ನಮ್ಮ ನಡುವೆ ಕಂಡುಬರಲು ಎಂದಿಗೂಸಾಧ್ಯವಿಲ್ಲ' ಎಂದಿದ್ದಾರೆ.

ಇದೇ ವೇಳೆ ಸಾಧ್ವಿ ಜನಸಂಖ್ಯೆ ನಿಯಂತ್ರಣಕ್ರಮಕ್ಕೂ ಒತ್ತಾಯಿಸಿದ್ದಾರೆ. 'ದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ಜಾರಿಯಾಗಬೇಕು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಂದ ಮತ ಚಲಾಯಿಸುವ ಹಕ್ಕೂ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನುಹಿಂಪಡೆಯಬೇಕು' ಎಂದು ಆಗ್ರಹಿಸಿದ್ದಾರೆ.

ADVERTISEMENT

ಇದನ್ನೂ ಓದಿ:

'ನೀವು ಎಷ್ಟು ಪತ್ನಿಯರನ್ನು ಹೊಂದಿದ್ದೀರಿ ಎಂಬುದು ಮುಖ್ಯವಲ್ಲ, ಆದರೆ, ಇಬ್ಬರೇ ಮಕ್ಕಳಿರಬೇಕು' ಎಂದಿದ್ದಾರೆ. ಲವ್‌ ಜಿಹಾದ್‌ ಬಗ್ಗೆಯೂ ಮಾತನಾಡಿದ ಅವರು, 'ರಾಜಸ್ಥಾನದಲ್ಲಿ ಪ್ರೇಮದ ಹೆಸರಿನಲ್ಲಿ ಲವ್‌ ಜಿಹಾದ್‌ ಇದ್ದು, ಹೆಣ್ಣು ಮಕ್ಕಳನ್ನು ಮೋಸ ಹಾಗೂ ಮತಾಂತರಗೊಳಿಸಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.

'ಮತ ರಾಜಕೀಯವನ್ನು ಪಕ್ಕಕ್ಕಿಡಿಮತ್ತು ಹಿಂದೂ ಹೆಣ್ಣುಮಕ್ಕಳ ರಕ್ಷಣೆಯತ್ತ ಗಮನಹರಿಸಿ'ಎನ್ನುವ ಮೂಲಕ ಕಾಂಗ್ರೆಸ್‌ ನೇತೃತ್ವದ ರಾಜಸ್ಥಾನ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಎಂಬ ಖೆಡ್ಡಕ್ಕೆ ಯಾರೂ ಬೀಳಬಾರದು. ಹಿಂದೂ-ಮುಸ್ಲಿಂ ಏಕತೆಯ ಹೆಸರಲ್ಲಿ ಮೊದಲು ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಆಗಿದ್ದರು ಎಂಬ ದಾರಿತಪ್ಪಿಸುವ ಹೇಳಿಕೆಗಳಿಗೆ ಕಿವಿಕೊಡಬಾರದು. ಧರ್ಮವನ್ನು ಹೊರತುಪಡಿಸಿ ಭಾರತೀಯರೆಲ್ಲರ ಡಿಎನ್‌ಎಗಳು ಒಂದೇ. ಆಚರಣೆಯ ಆಧಾರದಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಭಾಗವತ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.