ADVERTISEMENT

ಮಮತಾ ಬ್ಯಾನರ್ಜಿ ಇಸ್ಲಾಮಿಕ್‌ ಭಯೋತ್ಪಾದಕಿ: ಉ. ಪ್ರದೇಶ ಆನಂದ ಸ್ವರೂಪ್‌ ಶುಕ್ಲಾ

ಪಿಟಿಐ
Published 17 ಜನವರಿ 2021, 17:38 IST
Last Updated 17 ಜನವರಿ 2021, 17:38 IST
   

ಬಲ್ಲಿಯಾ, ಉತ್ತರಪ್ರದೇಶ: ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಬ್ಬ ಇಸ್ಲಾಮಿಕ್‌ ಭಯೋತ್ಪಾದಕಿ’ ಎಂದು ಉತ್ತರ ಪ್ರದೇಶದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಆನಂದಸ್ವರೂಪ್‌ ಶುಕ್ಲಾ ಭಾನುವಾರ ಟೀಕಿಸಿದ್ದಾರೆ.

‘ಆಕೆ ಬಾಂಗ್ಲಾದೇಶದ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯುವ ಚುನಾವಣೆಗಳು ಮುಗಿದ ನಂತರ ಆಕೆ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆಯಬೇಕಾಗುತ್ತದೆ’ ಎಂದು ಟೀಕಿಸಿದರು.

‘ಆಕೆಗೆ ಭಾರತೀಯತೆಯಲ್ಲಿ ನಂಬಿಕೆ ಇಲ್ಲ. ಹಿಂದೂ ದೇವರು ಹಾಗೂ ದೇವತೆಗಳನ್ನು ಅಮಾನಿಸಿದ್ದಾರೆ. ಆ ರಾಜ್ಯದಲ್ಲಿರುವ ಹಲವಾರು ದೇವಾಲಯಗಳನ್ನು ಧ್ವಂಸಗೊಳಿಸಲು ನೆರವಾಗಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.