ADVERTISEMENT

ಮಮತಾ ಬ್ಯಾನರ್ಜಿಯದ್ದು ಪ್ರತಿಬಂಧಕ ಮನಸ್ಥಿತಿ: ನರೇಂದ್ರ ಮೋದಿ ಟೀಕೆ

ಪಿಟಿಐ
Published 4 ಏಪ್ರಿಲ್ 2021, 19:31 IST
Last Updated 4 ಏಪ್ರಿಲ್ 2021, 19:31 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ಹರಿಪಾಲ್/ಸೋನಾರ್‌ಪುರ: ಮಮತಾ ಬ್ಯಾನರ್ಜಿಯದ್ದು ಪ್ರತಿಬಂಧಕ ಮನಸ್ಥಿತಿ. ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ಅವರು ಪಶ್ಚಿಮ ಬಂಗಾಳದಿಂದ ಓಡಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಟಾಟಾ ಮೋಟರ್ಸ್‌ ಸಿಂಗೂರ್‌ನಲ್ಲಿ ಆರಂಭಿಸಿದ್ದ ನ್ಯಾನೊ ಕಾರು ಘಟಕದ ವಿರುದ್ಧ ಟಿಎಂಸಿ ನಡೆಸಿದ್ದ ಹೋರಾಟದ ಬಗ್ಗೆ ಮೋದಿ ಅವರು ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ‘ಟಿಎಂಸಿ ಅಂದರೆ ಟಾಕಾ ಮಾರ್ ಕಂಪನಿ (ಲೂಟಿಕೋರ ಕಂಪನಿ). ದೀದಿ ಅವರೇ, ಮೋದಿ ಇಲ್ಲಿದ್ದಾನೆ ನಿಮ್ಮ ಆಟ ನಡೆಯುವುದಿಲ್ಲ ಎಂದು ನಿಮ್ಮ ಪಕ್ಷದ ಗೂಂಡಾಗಳಿಗೆ ಹೇಳಿ ’ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT