ADVERTISEMENT

ಪಶ್ಚಿಮ ಬಂಗಾಳ: ನಿಫಾ ಸೋಂಕು ದೃಢಪಟ್ಟ ಇಬ್ಬರು ನರ್ಸ್‌ಗಳ ಸ್ಥಿತಿ ಚಿಂತಾಜನಕ

ಪಿಟಿಐ
Published 14 ಜನವರಿ 2026, 9:25 IST
Last Updated 14 ಜನವರಿ 2026, 9:25 IST
<div class="paragraphs"><p>ನಿಫಾ ವೈರಸ್</p></div>

ನಿಫಾ ವೈರಸ್

   

(ರಾಯಿಟರ್ಸ್ ಚಿತ್ರ)

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಿಫಾ ಸೋಂಕು ತಗುಲಿರುವ ಇಬ್ಬರು ನರ್ಸ್‌ಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದಾದಿಯರನ್ನು ಕೋಲ್ಕತ್ತದ ಬೆಲಿಯಾಘಾಟ್ ಐಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮವಾರದಂದು ಇಬ್ಬರು ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಇಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಕೋಮಾದಲ್ಲಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸೋಂಕು ತಗುಲಿದ ದಾದಿಯರ ಸಂಪರ್ಕದಲ್ಲಿದ್ದ ವೈದ್ಯಾಧಿಕಾರಿ (ಆರ್‌ಎಂಎ) ಅವರಲ್ಲೂ ನಿಫಾ ಸೋಂಕಿನ ಲಕ್ಷ್ಮಣಗಳು ಕಾಣಿಸಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.

ವೈರಸ್ ರಿಚರ್ಸ್ ಡಯಾಗ್ನೊಸ್ಟಿಕ್ ಪ್ರಯೋಗಾಲಯದಲ್ಲಿ (ವಿಆರ್‌ಡಿಎಲ್) ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬಂದರೂ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.