ADVERTISEMENT

ಸಂದೇಶ್‌ಖಾಲಿ ಉದ್ವಿಗ್ನ: ಟಿಎಂಸಿ ನಾಯಕನನ್ನು ಅಟ್ಟಾಡಿಸಿಕೊಂಡು ಹೊಡೆದ ಉದ್ರಿಕ್ತರು

ಪಿಟಿಐ
Published 23 ಫೆಬ್ರುವರಿ 2024, 13:56 IST
Last Updated 23 ಫೆಬ್ರುವರಿ 2024, 13:56 IST
<div class="paragraphs"><p>ಟಿಎಂಸಿ ನಾಯಕ ಅಜಿತ್ ಮೈಟಿ ಅವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ.</p></div>

ಟಿಎಂಸಿ ನಾಯಕ ಅಜಿತ್ ಮೈಟಿ ಅವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ.

   

ಕೋಲ್ಕತ್ತ: ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಇಂದು (ಶುಕ್ರವಾರ) ಮತ್ತೆ ಪ್ರತಿಭಟನೆ ನಡೆದಿದೆ. ಟಿಎಂಸಿ ನಾಯಕ ಅಜಿತ್ ಮೈಟಿ ಅವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ.

ಅಜಿತ್ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸುತ್ತಿರುವ ವಿಡಿಯೊವನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ADVERTISEMENT

ಸಂದೇಶ್‌ಖಾಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಬೆನ್ನಲ್ಲೇ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ರಾಜೀವ್‌ ಕುಮಾರ್‌ ಅವರು ಸ್ಥಳಕ್ಕೆ ಧಾವಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಕಾರರಿಗೆ ಭರವಸೆ ನೀಡಿದ್ದಾರೆ.

ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಮತ್ತು ಅವರ ಸಹೋದರ ಸಿರಾಜ್‌ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಭೂಕಬಳಿಕೆ ಆರೋಪ ಮಾಡಿರುವ ಸ್ಥಳೀಯರು, ಅವರಿಬ್ಬರಿಗೆ ಸೇರಿದ ಸ್ವತ್ತುಗಳಿಗೆ ಬೆಂಕಿ ಇಟ್ಟಿದ್ದಾರೆ. ಅದಲ್ಲದೇ, ಟಿಎಂಸಿಯ ಸ್ಥಳೀಯ ಮುಖಂಡರ ಸ್ವತ್ತುಗಳ ಮೇಲೆ ದಾಳಿ ನಡೆಸಿ, ವಸ್ತುಗಳನ್ನು ಲೂಟಿ ಮಾಡಿದ್ದಾರೆ.‌

ಪ್ರತಿಭಟನೆ ವೇಳೆ ಸ್ಥಳೀಯರು ಮರದ ದಿಮ್ಮಿಗಳನ್ನು ರಸ್ತೆಗಳಿಗೆ ಅಡ್ಡಲಾಗಿ ಇರಿಸಿ, ಅವುಗಳಿಗೆ ಬೆಂಕಿ ಹಚ್ಚುವ ಮೂಲಕ ಪೊಲೀಸ್‌ ವಾಹನಗಳು ಝುಪ್‌ಖಾಲಿ ಮತ್ತು ಸಂದೇಶ್‌ಖಾಲಿ ಪ್ರದೇಶಗಳಿಗೆ ಪ್ರವೇಶಿಸದಂತೆ ತಡೆದಿದ್ದಾರೆ.

ಉದ್ವಿಗ್ನ ಗುಂಪು ಸಂದೇಶ್‌ಖಾಲಿ ಬಳಿಯ ಬೆಲ್ಮಾಜೂರ್‌ ಪ್ರದೇಶದಲ್ಲಿನ ಮೀನುಗಾರಿಕಾ ನೆಲೆ ಬಳಿಯ ಸ್ವತ್ತುಗಳಿಗೂ ಬೆಂಕಿ ಹಚ್ಚಿದೆ. ಇವು ಸಿರಾಜ್‌ಗೆ ಸೇರಿದ ಸ್ವತ್ತುಗಳು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.