ADVERTISEMENT

ಅಮೆರಿಕ ಭಾರತಕ್ಕೆ ಹತ್ತಿರವಾಗಲು ಚೀನಾ ಕಾರಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 7:25 IST
Last Updated 24 ಫೆಬ್ರುವರಿ 2020, 7:25 IST
   

ಏಷ್ಯಾದ ರಾಷ್ಟ್ರಗಳ ಮೇಲೆ ತನ್ನ ಪ್ರಭಾವವನ್ನು ಹೆಚ್ಚಿಸಲು ಅಮೆರಿಕವು ದಶಕಗಳಿಂದ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಇಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವುದು ಅಮೆರಿಕಕ್ಕೆ ನುಂಗಲಾರದ ತುತ್ತಾಗಿದೆ. ‘ಅಮೆರಿಕಕ್ಕೆ ಪ್ರತಿಸ್ಪರ್ಧಿ ರಾಷ್ಟ್ರವಾಗಿ ಚೀನಾ ರೂಪುಗೊಳ್ಳುತ್ತಿರುವುದು ಟ್ರಂಪ್‌ ಆಡಳಿತದ ಚಿಂತೆಗೆ ಕಾರಣವಾಗಿದೆ. ಆ ಕಾರಣಕ್ಕೆ ಭಾರತಕ್ಕೆ ಅಮೆರಿಕ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದ ರಷ್ಯಾ ನೀತಿಯಲ್ಲಿ ಈಚಿನ ದಶಕಗಳಲ್ಲಿ ಆಗಿರುವ ಬದಲಾವಣೆಯು ಅಮೆರಿಕದ ಉದ್ದೇಶ ಈಡೇರಿಕೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಭಾರತದ ಬಗ್ಗೆ ಅಮೆರಿಕಕ್ಕೆ ಅಸಮಾಧಾನಗಳು ಇದ್ದರೂ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಏಳಿಗೆಯು ಸರ್ವಾಧಿಕಾರಿ ರಾಷ್ಟ್ರವಾದ ಚೀನಾದ ಅಭಿವೃದ್ಧಿಯಷ್ಟು ಅಪಾಯಕಾರಿ ಅಲ್ಲ ಎಂಬ ವಿಚಾರವು ಭಾರತದತ್ತ ಸ್ನೇಹ ಹಸ್ತ ಚಾಚುವಂತೆ ಮಾಡಿದೆ.

ಚೀನಾದ ವಿಸ್ತರಣಾ ವಾದವು ಭಾರತಕ್ಕೂ ಆತಂಕದ ವಿಚಾರ. ಮಧ್ಯಏಷ್ಯಾದ ರಾಷ್ಟ್ರಗಳ ಜತೆ ಸತತವಾಗಿ ಸಂಪರ್ಕ ಸಾಧಿಸಿ ಚೀನಾದ ವಿಸ್ತರಣಾ ವಾದವನ್ನು ನಿಯಂತ್ರಿಸುವ ಯೋಜನೆಯನ್ನುಭಾರತ ಮತ್ತು ಅಮೆರಿಕ ಕಾರ್ಯಗತಗೊಳಿಸಿವೆ.

ADVERTISEMENT

ರಷ್ಯಾವನ್ನೂ ನಿಯಂತ್ರಿಸಬೇಕು ಎಂದು ಅಮೆರಿಕ ಬಯಸಿದೆ. ಆದರೆ ರಷ್ಯಾದ ಜತೆಗಿನ ಸಂಬಂಧವನ್ನು ಕೆಡಿಸಿಕೊಳ್ಳಲು ಭಾರತಕ್ಕೆ ಇಷ್ಟವಿಲ್ಲ. ಅದಕ್ಕಾಗಿ ಎಚ್ಚರಿಕೆಯ ನೀತಿಯನ್ನು ಭಾರತದ ರೂಪಿಸಿದೆ. ಇದನ್ನು ಅಮೆರಿಕವೂ ಒಪ್ಪಿಕೊಂಡಿದೆ. ಒಂದರ್ಥದಲ್ಲಿ ಚೀನಾವನ್ನು ನಿಯಂತ್ರಿಸಬೇಕೆಂಬ ಅಮೆರಿಕದ ಬಯಕೆಯು ಭಾರತಕ್ಕೆ ಲಾಭದಾಯಕವಾಗಿ ಪರಿಣಮಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.